ಫ್ಯಾಕ್ಟ್‌ಚೆಕ್: ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪೂರಿ, ಐಸ್‌ಕ್ರೀಂ, ಪನೀರ್ ಕರಿ, ಮಿಲ್ಕ್‌ಶೇಕ್ ನೀಡಲಾಗುತ್ತಿದೆಯೇ?

ಪೂರಿ, ಐಸ್‌ಕ್ರೀಂ, ಹಣ್ಣುಗಳು, ಪನೀರ್ ಕರಿ, ಮಿಲ್ಕ್‌ಶೇಕ್ ಮುಂತಾದ ಆಹಾರ ಪದಾರ್ಥಗಳೊಂದಿಗೆ ತಟ್ಟೆಯನ್ನು ಹಿಡಿದಿರುವ ಶಾಲಾ ಬಾಲಕನ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆಯಡಿ ಇವೆಲ್ಲವನ್ನು ನೀಡಲಾಗುತ್ತಿದೆ  ಎಂದು ಪ್ರತಿಪಾದಿಸಲಾಗುತ್ತಿದೆ.

1995 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾರ್ಯಕ್ರಮವಾದ ಸರ್ಕಾರದ ಮಧ್ಯಾಹ್ನದ  ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆರೋಗ್ಯಕರ, ಉತ್ತಮ ಗುಣಮಟ್ಟದ, ಪೌಷ್ಟಿಕಾಂಶದ ಆಹಾರವನ್ನು ನೀಡಲಾಗುತ್ತಿದೆ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಾದಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯೆ ಸಾಧ್ವಿ ಪ್ರಾಚಿ, BJP ಕಾರ್ಯಕರ್ತ ಅರುಣ್ ಯಾದವ್ ಮತ್ತು  ಫತೇಪುರ್ ಸಿಕ್ರಿ ಲೋಕಸಭಾ ಸದಸ್ಯ ರಾಜ್‌ಕುಮಾರ್ ಚಾಹರ್ ಅವರು ದೆಹಲಿ ಸರ್ಕಾರಿ ಶಾಲೆಯ ಮಾದರಿನ್ನು ಟೀಕಿಸುವ ಉದ್ದೇಶದಿಂದ ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತದೆ ಎನ್ನಲಾದ ಆಹಾರದ ಚಿತ್ರಗಳನ್ನು ಅಧಿಕೃತ ಮಿಡ್-ಡೇ ಮೀಲ್ ವೆಬ್‌ಸೈಟ್‌ನಲ್ಲಿರುವ ಮೆನು ವೈರಲ್ ಚಿತ್ರದಲ್ಲಿ ಕಂಡುಬರುವ ಐಟಂಗಳೊಂದಿಗೆ ಹೋಲಿಸಿದಾಗ ಎರಡು ಪಟ್ಟಿಗಳಿಗೂ ಹೊಂದಿಕೆಯಾಗುವುದಿಲ್ಲ.

ಈ ಕುರಿತು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಮಲಕಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿರುವ ಅಮಿತ್ ಅವರ ಟ್ವೀಟ್‌ ಲಭ್ಯವಾಗಿದೆ. ಆಗಸ್ಟ್ 31 ರಂದು, ಅವರು ಫೋಟೋಗಳನ್ನು ಹಂಚಿಕೊಂಡಿರುವ ಅವರು  ‘ತಿಥಿ ಊಟ’ ಮತ್ತು ‘ಆಡ್-ಆನ್ ಮಧ್ಯಾಹ್ನದ ಬಿಸಿ ಊಟ’ ಎಂದು ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಮತ್ತು  ಮಧ್ಯಾಹ್ನದ ಊಟದ ಯೋಜನೆಯಡಿ ಮಕ್ಕಳಿಗೆ ನಿಯಮಿತವಾಗಿ ನೀಡುವ ಆಹಾರವೇ ಅಥವಾ ವಿಶೇಷ ಸಂದರ್ಭವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲ್ಲು ದಿ ಕ್ವಿಂಟ್ ಅಮಿತ್ ಅವರನ್ನು ಮಾತನಾಡಿಸಿದೆ. ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಅಮಿತ್, “ಉತ್ತರ ಪ್ರದೇಶದ ಮಲಕಪುರ ಗ್ರಾಮದ ಪಂಚಾಯತ್‌ನಿಂದ ಜಾರಿಗೆ ತಂದಿರುವ ‘ಆಡ್-ಆನ್ ಮಧ್ಯಾಹ್ನದ ಊಟ'(ವಿಶೇಷ ದಿನಗಳಲ್ಲಿ ಹುಟ್ಟುಹಬ್ಬದಂದು) ಪರಿಕಲ್ಪನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಊಟವನ್ನು ಒದಗಿಸಲಾಗಿದೆ” ಎಂದು ಹೇಳಿದ್ದಾರೆ. “ಜನ್ಮದಿನದ ಶುಭಾಶಯಗಳು ಸೌರಭ್ ಭಯ್ಯಾ” ಎಂದು ಬರೆಯುವ ಬೋರ್ಡ್ ಅನ್ನು ಹಿಡಿದಿರುವ ವಿದ್ಯಾರ್ಥಿಗಳ ಫೋಟೋ ಕೂಡ ಈ ಚಿತ್ರಗಳಿಂದ ಲಭ್ಯವಾಗಿದೆ.

ಇದಲ್ಲದೆ, ನಾವು ಆನ್‌ಲೈನ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದೆವು ಮತ್ತು ಶಾಲೆಯಲ್ಲಿ ಈ ಊಟದ ಕುರಿತು 01 ಸೆಪ್ಟೆಂಬರ್ 2022 ರಂದು ಪ್ರಕಟವಾದ ನವಭಾರತ್ ಟೈಮ್ಸ್‌ನ ಲೇಖನವು ಕಂಡುಬಂದಿದೆ.

ಈ ಲೇಖನದ ಪ್ರಕಾರ, ಉತ್ತರ ಪ್ರದೇಶದ ಮಲಕಪುರದ ಅಪ್ಪರ್ ಪ್ರೈಮರಿ ಸ್ಕೂಲ್‌ನಲ್ಲಿ, ಸಾಮಾನ್ಯ ಮಧ್ಯಾಹ್ನದ ಊಟದ ಹೊರತಾಗಿ, ಪನೀರ್, ಪೂರಿ, ತರಕಾರಿಗಳು, ರಸಗುಲ್ಲಾ, ಸಿಹಿತಿಂಡಿಗಳು, ಖೀರ್, ಐಸ್‌ಕ್ರೀಮ್ ಮುಂತಾದ ತಿಂಡಿಗಳನ್ನು ಹುಟ್ಟುಹಬ್ಬದಂದು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಶಿಕ್ಷಕರು ಮತ್ತು ಗ್ರಾಮದ ಸರಪಂಚ್ ಅಮಿತ್ ಅವರ ಒಟ್ಟು ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಮಲಕಪುರ ಮತ್ತು ಗುಲಾಬಪುರ ಶಾಲೆಯಲ್ಲಿ ಸುಮಾರು 90 ವಿದ್ಯಾರ್ಥಿಗಳಿಗೆ ಇಂತಹ ಆಹಾರ ನೀಡಲಾಗುತ್ತಿದೆ ಎಂದು ಅಮಿತ್ ಹೇಳಿದ್ದಾರೆ.

ಇದೇ ಸಮಯದಲ್ಲಿ, ಜಲೌನ್‌ನ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಮಧ್ಯಾಹ್ನದ ಊಟದ ಮೆನುವನ್ನು ನೀಡುತ್ತಿಲ್ಲ ಎಂದು ಗ್ರಾಮಸ್ಥರಿಂದ ದೂರುಗಳು ಬಂದಿರುವುದನ್ನು ಇಲ್ಲಿ ಕಾಣಬಹುದು. ಈ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚರು ಹಂಚಿಕೊಂಡಿರುವ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಚಿತ್ರದಲ್ಲಿ ತೋರಿಸಿರುವ ಆಹಾರ ಪದಾರ್ಥಗಳನ್ನು ಯುಪಿ ಸರ್ಕಾರವು ಮಧ್ಯಾಹ್ನದ ಊಟದ ಯೋಜನೆಯಡಿ ನೀಡುವುದಿಲ್ಲ. ಶಾಲೆಯ ಶಿಕ್ಷಕರು ಮತ್ತು ಗ್ರಾಮದ ಪ್ರಧಾನರು ದಾನಿಗಳ ಸಹಾಯದಿಂದ ವಿಶೇಷ ಸಂದರ್ಭಗಳಲ್ಲಿ ಈ ಊಟವನ್ನು ಏರ್ಪಡಿಸುತ್ತಾರೆ. ಹಾಗಾಗಿ BJP ಮತ್ತು ಸಂಘ ಪರಿವಾರದ ಪ್ರಮುಖರು ತಮ್ಮ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಮನೆಗೆಲಸದ ಮಹಿಳೆಯ ನಾಲಿಗೆಯಿಂದ ಶೌಚ ಸ್ವಚ್ಛಗೊಳಿಸಿ ಚಿತ್ರಹಿಂಸೆ ನೀಡಿದ್ದು BJP ನಾಯಕಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights