ಪಿಜ್ಜಾ ಹಟ್ ಸಹ-ಸಂಸ್ಥಾಪಕ ಫ್ರಾಂಕ್ ಕಾರ್ನೆ ನಿಧನ : ಇವರ ಬಗೆಗಿನ ಕೆಲ ರೋಚಕ ಕಹಾನಿ ಇಲ್ಲಿದೆ…

ಅಮೆರಿಕದ ಕಾನ್ಸಾಸ್ ರಾಜ್ಯದ ವಿಚಿತಾ ನಗರದಲ್ಲಿ ‘ಪಿಜ್ಜಾ ಹಟ್’ ಪ್ರಾರಂಭಿಸಿದ ಫ್ರಾಂಕ್ ಕಾರ್ನೆ ನ್ಯುಮೋನಿಯಾದಿಂದ ಬುಧವಾರ ಮೃತಪಟ್ಟಿದ್ದಾರೆ. ಅವರಿಗೆ 82 ವರ್ಷ. ಕಾರ್ನೆ ತನ್ನ ಸಹೋದರನೊಂದಿಗೆ ‘ಪಿಜ್ಜಾ ಹಟ್’ ಅನ್ನು ಪ್ರಾರಂಭಿಸಿದರು. ಅವರು ಕಾಲವಾದ ಬಳಿಕ ಅವರ ಜೀವನದ ಕೆಲ ರೋಚಕ ವಿಷಯಗಳು ತಿಳಿದಿವೆ.

ಈ ವ್ಯವಹಾರವನ್ನು ಪ್ರಾರಂಭಿಸಲು ಅವನು ತನ್ನ ತಾಯಿಯಿಂದ $ 600 ಸಾಲ ಪಡೆದಿದ್ದರು. ಹೌದು… ‘ವಿಚಿತಾ ಈಗಲ್’ ಪತ್ರಿಕೆಯ ಪ್ರಕಾರ, ಕಾರ್ನೆ ಇತ್ತೀಚೆಗೆ ಕೊರೋನಾದಿಂದ ಚೇತರಿಸಿಕೊಂಡಿದ್ದರು. ಆದರೆ ಅವರು ದೀರ್ಘಕಾಲದವರೆಗೆ ಆಲ್ಜೆಮರ್ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು. ಇಂದು ಬೆಳಿಗ್ಗೆ 4: 30 ರ ಸುಮಾರಿಗೆ ಅವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಪತ್ನಿ ಮತ್ತು ಸಹೋದರ ಹೇಳಿದ್ದಾರೆ. ಫ್ರಾಂಕ್ ಕಾರ್ನೆ, ತನ್ನ 26 ವರ್ಷದ ಸಹೋದರ ಡಾನ್ ಜೊತೆಗೆ ವಿಚಿತಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ 19 ನೇ ವಯಸ್ಸಿನಲ್ಲಿ ಪಿಜ್ಜಾ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಉದ್ಯಮವನ್ನು ಪ್ರಾರಂಭಿಸಲು ತಾಯಿಯಿಂದ $ 600 ಸಾಲ ಪಡೆದಿದ್ದರಂತೆ.

1992 ರಲ್ಲಿ ವಿಚಿತಾ ರಾಜ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ನೆ,”ಒಬ್ಬ ಉದ್ಯಮಿಯು ತನ್ನ ಉತ್ಪನ್ನಕ್ಕೆ ಮಾರುಕಟ್ಟೆ ಇದೆ ಎಂದು ಯಾವಾಗಲೂ ಭಾವಿಸುತ್ತಾನೆ? ನಾನು ಅದನ್ನು ಮಾರಾಟ ಮಾಡಬಹುದೇ?” ಎಂದು ಯೋಚಿಸುತ್ತಾನೆ. ಆದರೆ ” ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ವ್ಯವಹಾರವನ್ನು ಪ್ರಾರಂಭಿಸಿದಾಗ, ಆರ್ಥಿಕತೆಯ ಬಗ್ಗೆ ನಾವು ಎಂದೂ ಯೋಚಿಸಲಿಲ್ಲ. ಜೊತೆಗೆ ಶ್ವೇತಭವನದಲ್ಲಿ ಯಾರು ಇದ್ದಾರೆ ಅಥವಾ ನಿರುದ್ಯೋಗ ದರ ಯಾವುದು ಎಂಬುದರ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ” ಎಂದು ಅವರು ಹೇಳಿದರು.

ಸದ್ಯ ಪೀಜಾ ಹಟ್ ಉತ್ತುಂಗ ಸ್ಥಾನದಲ್ಲಿದೆ. 1977 ರಲ್ಲಿ, ಪೆಪ್ಸಿಕೋ ಕಂಪನಿ ಪಿಜ್ಜಾ ಹಟ್ ಅನ್ನು 300 ಮಿಲಿಯನ್ಗೆ ಖರೀದಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights