ಮಹಾರಾಷ್ಟ್ರದಲ್ಲಿ ಜಾತಿಯ ಹೆಸರು ಹೊಂದಿರುವ ಪ್ರದೇಶಗಳಿಗೆ ಮರುನಾಮಕರಣ: ಸಂಪುಟ ನಿರ್ಧಾರ

ಮಹಾರಾಷ್ಟ್ರದಲ್ಲಿ ಜಾತಿ ಸೂಚಕ ಹೆಸರುಗಳನ್ನು ಹೊಂದಿರುವ ಎಲ್ಲಾ ಪ್ರದೇಶಗಳು ಮತ್ತು ಕಾಲನಿಗಳಿಗೆ ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ನಿರ್ಧರಿಸಿದೆ.

‘ಮಹರ್-ವಾಡಾ, ಬೌದ್ಧ-ವಾಡಾ, ಮಾಂಗ್-ವಾಡಾ, ಧೋರ್-ವಸ್ತಿ, ಬ್ರಹ್ಮನ್-ವಾಡಾ, ಮಾಲಿ-ಗಲ್ಲಿ ಮುಂತಾದ ಹೆಸರುಗಳು ಸಾಮಾನ್ಯವೇ ಆದರೂ, ಮಹಾರಾಷ್ಟ್ರದಂಥ ಪ್ರಗತಿಪರ ರಾಜ್ಯದಲ್ಲಿ ಅವು ಸೂಕ್ತವಾದವುಗಳಲ್ಲ. ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಜಾತಿ ಸೂಚಕ ಹೆಸರುಗಳಿರುವ ಪ್ರದೇಶಗಳಿಗೆ ಮರುನಾಮಕರಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ತಿಳಿಸಿದೆ.

‘ಮರುನಾಮಕರಣಗೊಳ್ಳುವ ಪ್ರದೇಶಗಳಿಗೆ ಸಮತಾ ನಗರ, ಭೀಮ ನಗರ, ಜ್ಯೋತಿನಗರ, ಶಾಹು ನಗರ, ಕ್ರಾಂತಿ ನಗರ ಎಂಬ ಹೆಸರುಗಳನ್ನು ನೀಡಲಾಗುತ್ತದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಬ್ರಿಟಿಷರ ವಸಾಹತುಶಾಹಿ ಆಡಳಿತದಲ್ಲಿ ಪ್ರದೇಶಗಳಿಗೆ ಜಾತಿ ಸೂಚಕ ಹೆಸರುಗಳನ್ನು ನಾಮಕರಣ ಮಾಡಲಾಗಿತ್ತು. ಜನರನ್ನು ಒಡೆದು ಆಳುವುದು ಅವರ ತಂತ್ರವಾಗಿತ್ತು. ನಮ್ಮ ಸರ್ಕಾರ ಈಗ ಅವುಗಳಿಗೆ ಮರುನಾಮಕರಣ ಮಾಡುತ್ತಿದೆ. ಈ ಮೂಲಕ ಜಾತಿ ಸೂಚಕ ಹೆಸರುಗಳನ್ನು ತೆಗೆದು ಆ ಪ್ರದೇಶಗಳಿಗೆ ಸಾಮಾಜಿಕ ಸೇವೆಯ ಮೂಲಕ ದೇಶಕ್ಕಾಗಿ ದುಡಿದವರ ಹೆಸರುಗಳನ್ನು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ” ಎಂದು ಮಹಾರಾಷ್ಟ್ರ ಸಚಿವ ಅಸ್ಲಾಮ್‌ ಶೇಖ್‌ ಹೇಳಿದ್ದಾರೆ.


ಇದನ್ನೂ ಓದಿ: ಕಾರ್ಯನಿರತವಾಗಿದೆ ಮೋದಿ ಸರ್ಕಾರ; 06 ವರ್ಷದಲ್ಲಿ ಬಿಜೆಪಿ ಸಾಧನೆಗಳೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights