ಲವ್‌ಜಿಹಾದ್‌ ಕಾನೂನು: ಪೊಲೀಸರಿಗೆ ಪ್ರೀತಿ ಪಾಠ ಹೇಳಿದ ಹಿಂದೂ-ಮುಸ್ಲೀಂ ಕುಟುಂಬ!

ಹೊಸ ಮತಾಂತರ ವಿರೋಧಿ ಕಾನೂನಿನ ಅನ್ವಯ ಹಿಂದೂ-ಮುಸ್ಲಿಂ ಅಂತರ್‌ಧರ್ಮೀಯ ವಿವಾಹವನ್ನು ಪೊಲೀಸರು ತಡೆದಿರುವ ಘಟನೆ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದಿದೆ.

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ವಧುವಿನ ವಿವಾಹಕ್ಕೆ ಅಡ್ಡಿಪಡಿದ ಪೊಲೀಸರ ನಡೆಗೆ ಯುವತಿಯ ತಾಯಿ ವಿರೋಧ ವ್ಯಕ್ತಪಡಿಸಿದ್ದು, ಯುವಕ-ಯುವತಿ ಇಬ್ಬರೂ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರ ವಿವಾಹವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಮ್ಯಾ, ವಾಜೀದ್‌ ಖಾನ್ ವಿವಾಹ: ಸಂಗಾತಿ ಆಯ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ; ಹೈಕೋರ್ಟ್‌

ನಾವು ಹಲವು ವರ್ಷಗಳಿಂದ ಮುಸ್ಲಿಂ ಜನರ ಒಡನಾಟದೊಂದಿಗೆ ಬದುಕುತ್ತಿದ್ದೇವೆ. ನಮ್ಮ ನೆರೆಹೊರೆಯಲ್ಲಿ ಮುಸ್ಲೀಮರು ವಾಸಿಸುತ್ತಿದ್ದಾರೆ. ನಮಗೆ ಮುಸ್ಲಿಂ ಧರ್ಮದಿಂದ ಯಾವುದೇ ಸಮಸ್ಯೆಯಿಲ್ಲ. ನನ್ನ ಮಗಳು ಮುಸ್ಲೀಂ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಆಕೆ ಇಸ್ಲಾಂಗೆ ಮತಾಂತರವಾಗಿಲ್ಲ. ಇವರಿಬ್ಬರ ಮದುವೆ ಹೊಸ ಕಾನೂನಿಗೂ ಮೊದಲೇ ನಿಶ್ಚಯವಾಗಿತ್ತು. ಅವರ ಮದುವೆಗೆ ಯಾರ ಅನುಮತಿಯೂ ಬೇಕಿಲ್ಲ ಎಂದು ಯುವತಿಯ ತಾಯಿ ಹೇಳಿದ್ದಾರೆ.

ನಾವು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ನಡುವೆ ಮತಾಂತರದ ವಿಚಾರವೇ ಬಂದಿಲ್ಲ. ನಾವು ಎರಡೂ ಧರ್ಮವನ್ನ ಗೌರವಿಸುತ್ತೇವೆ. ನಮ್ಮ ವಿವಾಹಕ್ಕೂ ಕಾನೂನಿನ ಅಗತ್ಯವಿದೆ ಎಂದು ಗೊತ್ತಿದ್ದರೆ ಮೊದಲೇ ನಾವು ಅದನ್ನು ಮಾಡುತ್ತಿದ್ದೆವು ಎಂದು ವಿವಾಹವಾದ ಯುವಕ-ಯುವತಿ ಹೇಳಿದ್ದಾರೆ.


ಇದನ್ನೂ ಓದಿ: ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights