80ರ ಅತ್ತೆಯನ್ನು ಮನೆಯಿಂದ ಹೊರಹಾಕಿದ ಸೊಸೆ: ಕೊರೆಯುವ ಚಳಿಯಲ್ಲಿ ನರಳಾಡಿತು ಜೀವ..!

ಹರಿಯಾಣದಿಂದ ಆಘಾತಕಾರಿ ಘಟನೆಯೊಂದು ಮಾನವೀಯತೆಯನ್ನು ಮುಜುಗರಕ್ಕೀಡು ಮಾಡಿದೆ. ದಯೆಯಿಲ್ಲದ ಸೊಸೆ 80 ವರ್ಷದ ಅತ್ತೆಯ ಮೇಲೆ ಹಲ್ಲೆ ಮಾಡಿ ಅವಳೊಂದಿಗೆ ವಸ್ತುಗಳನ್ನು ಮನೆಯ ಹೊರಗೆ ಹಾಕಿದ ಘಟನೆ ಹರಿಯಾಣದ ಹಿಸಾರ್‌ನ ಆಜಾದ್ ನಗರದಲ್ಲಿ ನಡೆದಿದೆ. ಮನೆಯ ಹೊರಗೆ ಕೊರೆಯುವ ಚಳಿಯಲ್ಲಿ ವಯಸ್ಸಾದ ಅಜ್ಜಿಯ ಕರುಣಾಜನಕ ಸ್ಥಿತಿಯಲ್ಲಿ ಮಲಗಿದ್ದನ್ನು ಕಂಡು ನೆರೆಹೊರೆಯವರು ಮಿಡುಕಾಡಿದ್ದಾರೆ.

ಚನ್ನೋ ಎಂಬ ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ ಆಕೆಯ ವಸ್ತುಗಳನ್ನು ಸಹ ಹೊರಗೆ ಎಸೆದಿದ್ದಾಳೆ. ಪ್ರಕರಣದ ವಿಡಿಯೋ ಶುಕ್ರವಾರ ವೈರಲ್ ಆದ ನಂತರ ಪೊಲೀಸರು ಆರೋಪಿ ಮಹಿಳೆ ಶಕುಂತಲಾ ಅವರನ್ನು 323, 506, 509 ಸೆಕ್ಷನ್ ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ವೀಡಿಯೋ ನೋಡಿದ ಕೂಡಲೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್, ವೃದ್ಧಳನ್ನು ಮನೆಯಿಂದ ಹೊರಗೆ ಹಾಖಿದ ವಿಡಿಯೋ ವೈರಲ್ ಆಗಿದೆ. ಈ ಸಂದರ್ಭದಲ್ಲಿ, ವೃದ್ಧ ತನ್ನ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು. ತನ್ನ ಸಾಮಾನುಗಳನ್ನು ಸಹ ರಸ್ತೆಗೆ ಎಸೆದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ವೃದ್ಧಯನ್ನು ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights