ಅಸ್ಸಾಂ ಸ್ಥಳೀಯ ಚುನಾವಣೆಯಲ್ಲಿ BJPಗೆ ಮುಖಭಂಗ; ಆದರೂ, ಆಡಳಿತ ರಚಿಸಲು ಮುಂದಾದ ಬಿಜೆಪಿ!

ಅಸ್ಸಾಂನ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ)ನ 40 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಪಕ್ಷವು 17 ಸ್ಥಾನಗಳನ್ನು ಗೆದ್ದರೆ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) 12, ಬಿಜೆಪಿ 09, ಕಾಂಗ್ರೆಸ್ ಒಂದು ಮತ್ತು ಗಣ ಸುರಕ್ಷ ಪಕ್ಷ ಒಂದು ಸ್ಥಾನಗಳನ್ನು ಗೆದ್ದಿದೆ.

ಚುನಾವಣಾ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಹೀಗಾಗಿ ಬಿಜೆಪಿ ಮತ್ತು ಯುಪಿಪಿಎಲ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋಡೋ ಮತ್ತು ಅಸ್ಸಾಂ ಬಿಜೆಪಿ ಸಂಸದ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯಾ ಅವರು ಭೇಟಿ ಮಾಡಿದ್ದು, ಬಿಜೆಪಿ ಮತ್ತು ಯುಪಿಪಿಎಲ್ ಒಟ್ಟಾಗಿ ಪರಿಷತ್ತು ರಚಿಸುವುದಾಗಿ ತಿಳಿಸಿದ್ದಾರೆ.

ಮಂಡಳಿಯ ಆಡಳಿತಾರೂಢ ಬಿಪಿಎಫ್‌ ಪಕ್ಷದ ವಿರುದ್ಧ ಬಿಜೆಪಿ ಮತ್ತು ಯುಪಿಪಿಎಲ್‌ ಪಕ್ಷಗಳು ಭಾರೀ ಅಭಿಯಾನ ನಡೆಸಿದರೂ, ಬಿಪಿಎಫ್‌ 17 ಸ್ಥಾನಗಳನ್ನು ಗೆದ್ದುಕೊಂಡಿದೆ.


ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ; ಕಾಂಗ್ರೆಸ್‌ಗೆ ನಿರಾಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights