ಅಲಿಘಡ್ ವಿವಿಗೆ ಪ್ರಧಾನಿ: ಮೋದಿ ಭೇಟಿಗೆ ವಿದ್ಯಾರ್ಥಿಗಳ ವಿರೋಧ!
ಡಿಸೆಂಬರ್ 22ರಂದು ನಡೆಯಲಿರುವ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆದರೆ, ವಿವಿಯ ನಿರ್ಧಾರದಿಂದ ಅಲ್ಲಿನ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ.
ಇದೇ ಮೊದಲು ಎಎಂಯು ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಮೋದಿ ವಿಡಿಯೋ ಕಾನ್ಫರೆನ್ಸ್ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಎಎಂಯುನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪ್ರೊ) ಒಮರ್ ಪೀರ್ಜಾಡಾ ತಿಳಿಸಿದ್ದಾರೆ.
ವಿವಿ ಕಾರ್ಯಕ್ರಮಕ್ಕೆ ಮೋದಿ ಭಾಗವಹಿಸುತ್ತಿರುವುದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಕಲಿಕಾ ಸಂಸ್ಥೆಗೆ ಮುಖ್ಯ ಅಥಿತಿಯಾಗಿ ಬರುವವರ ವಿಶ್ವಾಸಾರ್ಹತೆಯನ್ನು ಯೋಚಿಸುವುದು ಮುಖ್ಯ. ಮೋದಿ ಮತ್ತು ಬಿಜೆಪಿ ಎಎಂಯು ಅನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾರೆ. ಅಲ್ಲದೆ, ವಿವಿಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಲು ಬಿಜೆಪಿ ಸಹಾಯ ಮಾಡಿದೆ ಎಂದು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮಸ್ಕೂರ್ ಅಹ್ಮದ್ ಉಸ್ಮಾನಿ ಹೇಳಿದ್ದಾರೆ.
ಕ್ಯಾಂಪಸ್ನಲ್ಲಿ ನಡೆದ ಸಿಎಎ / ಎನ್ಆರ್ಸಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಡೆಸಿದ್ದಾರೆ. ಅಲ್ಲದೆ, ಇನ್ನೂ ಹಲವು ಭಾರಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಅವರು ತನಿಖೆ ನಡೆಸುತ್ತಾರೆಯೇ? ಅವರು ಆ ಭರವಸೆ ನೀಡಿದರೆ ಮತ್ತು ದೌರ್ಜನ್ಯಕ್ಕೆ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳುವುದಾದರೆ ಅವರನ್ನು ನಾವು ಸ್ವಾಗತಿಸುತ್ತೇವೆ. ಇಲ್ಲವಾದರೆ, ಅವರ ಭಾಗವಹಿಸುವಿಕೆಯನ್ನು ವಿರೋಧಿಸುವ ವಿದ್ಯಾರ್ಥಿಗಳು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
“ನಾವು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ವಿರೋಧಿಸುತ್ತಿಲ್ಲ. ಆದರೆ ಅವರ ನೀತಿಗಳನ್ನು ವಿರೋಧಿಸುತ್ತಿದ್ದೇವೆ, ಏಕೆಂದರೆ ಅವರ ಪಕ್ಷವು ಯಾವಾಗಲೂ ವಿದ್ಯಾರ್ಥಿಗಳು ಮತ್ತು ಮುಸ್ಲಿಮರ ವಿರುದ್ಧ ದ್ವೇಷವನ್ನು ಬಿತ್ತುತ್ತದೆ. ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳೊಂದಿಗೆ ಎಎಮ್ಯು ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದಾಗ, ಪೊಲೀಸರು ಮಿತಿಮೀರಿ ವರ್ತಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಮತ್ತು ಅಶ್ರುವಾಯುಗಳನ್ನು ಬಳಸಿದ್ದಾರೆ. ಗ್ರಂಥಾಲಯದಲ್ಲಿ ಓದುತ್ತಿರುವವರನ್ನು ಸಹ ಬಿಡದೆ ನಿರ್ದಯವಾಗಿ ಥಳಿಸಿದ್ದಾರೆ. ಈ ಭೀಕರ ಘಟನೆಗೆ ಮೋದಿ ಸರ್ಕಾರ ಕ್ಷಮೆಯಾಚಿಸುತ್ತದೆಯೇ? ಇಂತಹ ಘಟನೆಗಳು ಮತ್ತೆ ಯಾವುದೇ ಕ್ಯಾಂಪಸ್ನಲ್ಲಿ ನಡೆಯುವುದಿಲ್ಲ ಎಂದು ಭರವಸೆ ನೀಡುತ್ತದೆಯೇ? ಎಂದು ಎಎಂಯುನ ಸಂಶೋಧನಾ ವಿದ್ವಾರ್ಥಿನಿ ದೀಬಾ ನಿಯಾಜಿ ಕೇಳಿದ್ದಾರೆ.

ಮಾರ್ಚ್ 2018ರಲ್ಲಿ ವಿಶ್ವವಿದ್ಯಾನಿಲಯದ 65 ನೇ ವಾರ್ಷಿಕ ಸಮ್ಮೇಳನ ಸಮಾರಂಭದ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕ್ಯಾಂಪಸ್ಗೆ ಭೇಟಿ ನೀಡಿದ್ದನ್ನು ವಿರೋಧಿಸಿ ವಾರ್ಸಿಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬುದು.
Read Also: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ???

