ಹೊಸ ಕೊರೊನಾ ಆತಂಕ : ಭಾರತದಲ್ಲಿ ಮುಂದಿನ ವಾರ ಲಸಿಕೆ ಬಳಕೆಗೆ ಅನುಮತಿ!

ಹೊಸ ಕೊರೋನಾ ಆತಂಕದ ನಡುವೆಯೇ ಭಾರತದಲ್ಲಿ ಮುಂದಿನ ವಾರದ ವೇಳೆಗೆ ಲಸಿಕೆಗೆ ಅನುಮತಿ ದೊರಕುವ ಸಾಧ್ಯತೆಗಳು ದಟ್ಟವಾಗಿವೆ.ಆಸ್ಟ್ರಾ ಜೆನೆಕಾ ಮತ್ತು ಆಕ್ಸ್ಫರ್ಡ್ ವಿವಿ ಜಂಟಿಯಾಗಿ ಸಂಸ್ಥೆ ತಯಾರು ಮಾಡಿರುವ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕರು ಮುಂದಿನ ವಾರದ ವೇಳೆಗೆ ಸಾಮೂಹಿಕ ಬಳಕೆಗೆ ಅನುಮತಿ ನೀಡಲಿದ್ದಾರೆ ಎಂದು ವರದಿಗಳು ಹೇಳಿವೆ.

ಕಳೆದ ಕೆಲ ವಾರಗಳ ಹಿಂದೆಯೇ ಸಂಸ್ಥೆ ಅನುಮತಿ ಕೋರಿತ್ತಾದರೂ ಕೆಲ ವಿವರಗಳ ಸಲ್ಲಿಸಲು ಸೂಚಿಸಲಾಗಿತ್ತು. ಈಗ ವಿವರಗಳು ಸಲ್ಲಿಕೆಯಾಗಿದ್ದು, ಮುಂದಿನ ವಾರ ನಿಯಂತ್ರಕರು ತೀರ್ಮಾನ ಕೈಗೊಳ್ಳಲಿದ್ದಾರೆ.

ಈ ಮಧ್ಯೆ ದೇಶೀಯವಾಗಿ ತಯಾರಾಗುತ್ತಿರುವ ಲಸಿಕೆ ಪ್ರಯೋಗಕ್ಕೆ ಒಳಗಾಗಲು ಭಾರತ್ ಬಯೋಟೆಕ್ ಸಂಸ್ಥೆ 13 ಸಾವಿರ ಮಂದಿಯನ್ನು ಬಳಸಿಕೊಂಡಿದೆ.ಇದಕ್ಕಾಗಿ 26 ಸಾವಿರ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿತ್ತಾದರೂ ಅಂತಿಮವಾಗಿ ಸುಮಾರು 13 ಸಾವಿರ ಮಂದಿಗೆ ಈಗಾಗಲೇ ಯಶಸ್ವಿಯಾಗಿ ಲಸಿಕೆ ಪ್ರಯೋಗಿಸಲಾಗಿದೆ.

ಇದೇ ವೇಳೆ ಹೊಸ ಸ್ವರೂಪದ ಕೊರೋನಾ ವೈರಸ್ ತಡೆಯಲು ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಕಡ್ಡಾಯ ತಪಾಸಣೆ ಮತ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಅಲ್ಲದೆ, ಕಳೆದೆರಡು ವಾರಗಳಲ್ಲಿ ಬ್ರಿಟನ್‍ನಿಂದ ಕರ್ನಾಟಕಕ್ಕೆ ಆಗಮಿಸಿರುವ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಲು ಮುಂದಾಗಿದೆ.ಇನ್ನು ಸೋಮವಾರ ಎರಡು ವಿಮಾನಗಳಲ್ಲಿ ಆಗಮಿಸಿದ 587 ವ್ಯಕ್ತಿಗಳ ಪೈಕಿ 138 ಜನರಿಗೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ನಡೆಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights