ಚಾಲ್ತಿಗೆ ಬಂದಿರುವುದು ‘BJPಯ ಲಸಿಕೆ’; ಅದನ್ನು ನಂಬಲು ಸಾಧ್ಯವಿಲ್ಲ: ಅಖಿಲೇಶ್ ಯಾದವ್
ದೇಶದಲ್ಲಿ ಚಾಲ್ತಿಗೆ ತರಲಾಗಿರುವ ಕೋವಿಡ್ ಲಸಿಕೆಯನ್ನು “ಬಿಜೆಪಿಯ ಲಸಿಕೆ” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕರೆದಿದ್ದು, ಆ ಲಸಿಕೆಯನ್ನು ನಂಬಲು ಸಾಧ್ಯವಿಲ್ಲ. ನಾನು ಆ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಾವು ವಿಜ್ಞಾನಿಗಳ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ಆದರೆ ಬಿಜೆಪಿಯ ತಾಲಿ ಮತ್ತು ಥಾಲಿ ವಾಲಿ ಅವೈಜ್ಞಾನಿಕ ಚಿಂತನೆಯ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.
ಕೋವಿಡ್ ವಿರೋಧಿ ಲಸಿಕೆಯನ್ನು ಬಿಜೆಪಿಯ ಲಸಿಕೆ ಎಂದು ಹೇಳಿ ಟ್ವೀಟ್ ಮಾಡಿರುವ ಅವರು, “ಲಸಿಕೆಯನ್ನು ನಾನು ಹೇಗೆ ನಂಬಬಲ್ಲೆ, ಅದನ್ನು ಬಿಜೆಪಿಯಿಂದ ವ್ಯಾಕ್ಸಿನೇಷನ್ ಮಾಡಲು ಬಳಸಲಾಗುತ್ತದೆ. ಬಿಜೆಪಿಯ ಲಸಿಕೆಯಿಂದ ನಾವು ಲಸಿಕೆ ಪಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಅಖಿಲೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಆಡಳಿತಾರೂಢ BJP ದೇಶದ ವೈದ್ಯರನ್ನು ಮತ್ತು ವಿಜ್ಞಾನಿಗಳನ್ನು “ಅವಮಾನಿಸಿದ್ದಾರೆ” ಎಂದು ಹೇಳಿದೆ.
“ಅಖಿಲೇಶ್ ಯಾದವ್ ಅವರಿಗೆ ಲಸಿಕೆ ಬಗ್ಗೆ ನಂಬಿಕೆ ಇಲ್ಲ. ಉತ್ತರ ಪ್ರದೇಶದ ಜನರಿಗೆ ಅಖಿಲೇಶ್ ಯಾದವ್ ಬಗ್ಗೆ ನಂಬಿಕೆಯಿಲ್ಲ. ಲಸಿಕೆ ಕುರಿತು ಅವರು ಪ್ರಶ್ನೆ ಎತ್ತುವುದು ದೇಶದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಮಾಡಿದ ಅವಮಾನ ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು” ಎಂದು ಬಿಜೆಪಿ ನಾಯಕ ಮತ್ತು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಇದನ್ನೂ ಓದಿ: ಮಸೀದಿ ಮೇಲೆ ಕೇಸರಿ ಧ್ವಜ ನೆಟ್ಟ ಸಂಘಪರಿವಾರ; ಹಿಂಸಾಚಾರ ನಡೆಸಿ-ಲಕ್ಷಾಂತರ ರೂ ಲೂಟಿ!

