ದೇವಾಲಯದಲ್ಲಿ ತಲೆಬಾಗಿ ನಮಸ್ಕರಿಸುವ ಭಕ್ತರಿಗೆ ಆಶೀರ್ವಾದ ಮಾಡುವ ಶ್ವಾನ..!
ನಾಯಿಗಳು ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜೀವಿಗಳು. ಇದನ್ನು ನಾವ್ಯಾರು ನಿರಾಕರಿಸುವಂತಿಲ್ಲ. ಮಹಾರಾಷ್ಟ್ರದ ಸಿದ್ಧಿವಿನಾಯಕ್ ದೇವಸ್ಥಾನದಲ್ಲಿ ನಾಯಿಮರಿ ಭಕ್ತರನ್ನು ಆಶೀರ್ವದಿಸುವ ಮತ್ತು ಕೈಕುಲುಕುವ ಒಂದು ವಿಡಿಯೋ ಕೂಡ ಇದನ್ನು ಸಾಬೀತುಪಡಿಸುತ್ತಿದೆ. ಇದು ಇಂದು ನೀವು ನೋಡುವ ಅತ್ಯಂತ ಪ್ರೀತಿಯ ದೃಶ್ಯವಾಗಿದೆ. ಅರುಣ್ ಲಿಮಾಡಿಯಾ ಎಂಬ ಬಳಕೆದಾರರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದು ಕ್ರೇಜಿ ವೈರಲ್ ಆಗಿದೆ.
ವೈರಲ್ ಕ್ಲಿಪ್ನಲ್ಲಿ ಸಿದ್ಧಿವಿನಾಯಕ್ ದೇವಸ್ಥಾನದ ಪ್ರವೇಶದ್ವಾರದ ಹೊರಗೆ ಎತ್ತರದ ಬಂಡೆಯ ಮೇಲೆ ನಾಯಿಮರಿ ಕುಳಿತು ಭಕ್ತರು ದೇವಾಲಯದಿಂದ ನಿರ್ಗಮಿಸುತ್ತಿದ್ದಂತೆ ಕೈಕುಲುಕುವುದರೊಂದಿಗೆ ತಲೆಬಾಗಿದವರಿಗೆ ಆಶೀರ್ವಾದ ಮಾಡುವ ದೃಶ್ಯ ಪ್ರಾಣಿಪ್ರಿಯರಿಗೆ ಆಶ್ಚರ್ಯವನ್ನುಂಟುಮಾಡಿದೆ. ಈ ದೃಶ್ಯ ನೋಡುಗರಿಗೆ ಅತ್ಯಂತ ಮೋಹಕವಾಗಿತ್ತು.
ಫೇಸ್‌ಬುಕ್ ಬಳಕೆದಾರರು ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬ ಮನುಷ್ಯ ದೇವಾಲಯದಿಂದ ಹೊರಬರುತ್ತಾನೆ. ಶ್ವಾನದ ಮುಂದೆ ಕೈ ಮುಗಿದು ತಲೆಬಾಗುತ್ತಾನೆ. ಆಗ ಕೂಡಲೆ ನಾಯಿ ತಲೆ ಮುಟ್ಟಿ ಆಶೀರ್ವಾದ ಮಾಡುತ್ತದೆ.
ಎರಡೂ ಕ್ಲಿಪ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಂತರ, ಅವು ತಕ್ಷಣವೇ ವೈರಲ್ ಆಗಿವೆ. ತಲಾ 1.3 ಮಿಲಿಯನ್ ಮತ್ತು 110 ಕೆ ವೀಕ್ಷಣೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ.
ಕೆಲವು ಕಾಮೆಂಟ್‌ಗಳನ್ನು ನೋಡಿ: