ನೀವೊಬ್ಬ ಗಂಡಸಾಗಿದ್ದರೆ ನಿಮ್ಮ ಕಾಲರ್ ಹಿಡಿಯುತ್ತಿದ್ದೆ; ಮಹಿಳಾ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ ಹಾಕಿದ ಕಾಂಗ್ರೆಸ್‌ ಶಾಸಕ

ನೀವೊಬ್ಬ ಗಂಡಸಾಗಿದಿದ್ದರೆ ನಿಮ್ಮ ಕಾಲರ್‌‌‌ ಹಿಡಿದು ನಿಮಗೆ ಮೆಮೋ ಕೊಡುತ್ತಿದ್ದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ‌ರಾಗಿರುವ ಹರ್ಷ್ ವಿಜಯ್ ಗೆಹ್ಲೋಟ್ ಅವರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕಾಮಿನಿ ಠಾಕೂರ್‌ಗೆ ಬೆದರಿಕೆ ಹಾಕಿದ್ದಾರೆ. ಅವರು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ಶಾಸಕನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

“ನೀವು ಒಬ್ಬ ಮಹಿಳೆ. ನೀವು ಗಂಡಸಾಗಿದ್ದರೆ ನಾನು ನಿಮ್ಮ ಕಾಲರ್ ಹಿಡಿದು, ನಿಮಗೆ ಮೆಮೋ ಕೊಡುತ್ತಿದ್ದೆ” ಎಂದು ಗೆಹ್ಲೋಟ್ ವೀಡಿಯೊದಲ್ಲಿ ಹೇಳುತ್ತಾರೆ.

ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಮತ್ತು ಕೇಂದ್ರದ ಮೂರು ವಿವಾದಾತ್ಮಕ ಕಾನೂನುಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಆಯೋಜಿಸಿದ್ದ ಟ್ರಾಕ್ಟರ್ ರ್‍ಯಾಲಿಯ ನಂತರ ಮಧ್ಯಪ್ರದೇಶ-ರಾಜಸ್ಥಾನ ಗಡಿಯ ಸಮೀಪ ರತ್ನಂ ಜಿಲ್ಲೆಯ ಸೈಲಾನಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ರ್‍ಯಾಲಿಯ ನಂತರ ಶಾಸಕರ ನೇತೃತ್ವದ ಜನಸಮೂಹವು ಮನವಿ ಪತ್ರವನ್ನು ಸಲ್ಲಿಸಲು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಚೇರಿಗೆ ತಲುಪಿತ್ತು. ಆದರೆ ಕಾಮಿನಿ ಠಾಕೂರ್ ಅವರು ಹೊರಬರಲು ತಡವಾಗಿದ್ದಕ್ಕೆ ಗೆಹ್ಲೋಟ್ ಸಾರ್ವಜಿಕವಾಗಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಬಂಗಾಳ: ಸುವೆಂದು ಅಧಿಕಾರಿಗೆ ಸೆಡ್ಡು; ಕ್ಷೇತ್ರ ನಂದಿಗ್ರಾಮ್‌ನಿಂದ ಮಮತಾ ಸ್ಪರ್ಧೆ: ಕ್ಷೇತ್ರದ ವಿಶೇಷವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights