ಗಣರಾಜ್ಯೋತ್ಸವದಂದು ರೈತರಿಂದ 100 ಕಿ.ಮೀ ಟ್ರ್ಯಾಕ್ಟರ್ ಪರೇಡ್…
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಹಲಿ ಗಡಿ ಭಾಗದಲ್ಲಿ ಕಳೆದ ಒಂದುವರೆ ತಿಂಗಳಿನಿಂದ ನಡೆಯುತ್ತಿರುವ ರೈರರ ಪ್ರತಿಭಟನೆ ಕೇಂದ್ರಕ್ಕೆ ಮತ್ತಷ್ಟು ಬಿಸಿ ಮುಟ್ಟಿಸಲು ಸಿದ್ಧವಾಗಿದೆ. ಜನವರಿ 26 ಗಣರಾಜ್ಯಯೋತ್ಸವದ ದಿನದಿಂದ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸಲಿದ್ದಾರೆ. ಈ ರ್ಯಾಲಿಯಲ್ಲಿ ದೇಶದ ವಿವಿದ ರಾಜ್ಯಗಳಿಂದ ರೈತರು ಸ್ವತ: ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು 100ಕಿ.ಮೀ ವರೆಗೂ ಈ ರ್ಯಾಲಿ ನಡೆಯಲಿದೆ.
ಮೂರು ಕೃಷಿ ಕಾನೂನುಗಳನ್ನು ಕೈಬಿಡುವಂತೆ ಒತ್ತಾಯಿಸಿ ನಿರಂತರವಾಗಿ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದರೂ ಕೇಂದ್ರ ಸರ್ಕಾರ ರೈತರ ಮನವೊಲಿಸಲು ಸಾಧ್ಯವಾಗಿಲ್ಲ. ಹಲವಾರು ಸುತ್ತಿನ ಮಾತುಕತೆಗೆ ಕರೆದರು ರೈತರ ಬೇಡಿಕೆಗಳು ಈಡೇರಿಲ್ಲ. ಪಟ್ಟು ಬಿಡೆ ರೈತರು ಕೃಷಿ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ಆದರೆ ಜ.26ರಂದು ಟ್ರ್ಯಾಕ್ಟರ್ ರ್ಯಾಲಿಗೆ ಪೊಲೀಸ್ ಅನುಮತಿ ನೀಡಿದ್ದು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ. ರೈತರ ಪ್ರತಿಭಟನೆ ತಡೆಯುವಂತ ಪ್ರಯತ್ನಗಳು ಸಾಕಷ್ಟು ನಡೆಯುತ್ತಿವೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ದೇಶದ ಜನತೆಗೆ ಇದೆ. ಹೀಗಾಗಿ ಅನ್ನದಾತರು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ “ರೈತರು ನಮಗೆ ಯಾವುದೇ ಮಾರ್ಗವನ್ನು ಲಿಖಿತವಾಗಿ ನೀಡಿಲ್ಲ. ನಾವು ಮಾರ್ಗವನ್ನು ಲಿಖಿತವಾಗಿ ಸ್ವೀಕರಿಸಿದ ನಂತರ ನಾವು ನಿಮಗೆ ತಿಳಿಸುತ್ತೇವೆ” ಎಂದು ಳಿಸಿದರು.
ಯೂನಿಯನ್‌ಗಳು ಮತ್ತು ಪೊಲೀಸರ ನಡುವಿನ ಸಭೆಯಲ್ಲಿ ಭಾಗವಹಿಸಿದ ನಂತರ ರೈತ ಮುಖಂಡ ಅಭಿಮನ್ಯು ಕೊಹಾರ್, ದೆಹಲಿಯ ಗಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿ ಬಿಂದುಗಳಿಂದ ಟ್ರ್ಯಾಕ್ಟರ್ ಮೆರವಣಿಗೆಗಳು ಪ್ರಾರಂಭವಾಗಲಿದೆ.ದೆಹಲಿ ಗಡಿ ಬಿಂದುಗಳಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು ಜನವರಿ 26 ರಂದು ತೆಗೆದುಹಾಕಲಾಗುವುದು ಮತ್ತು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಿದ ನಂತರ ರೈತರು ಟ್ರಾಕ್ಟರ್ ರ್ಯಾಲಿಗಳನ್ನು ಕೈಗೊಳ್ಳಲಿದ್ದಾರೆ ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.
ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳ ಲಕ್ಷಾಂತರ ರೈತರು ಜನವರಿ 26 ರಂದು ನವದೆಹಲಿ ಮೂಲಕ ಟ್ರಾಕ್ಟರುಗಳನ್ನು ಓಡಿಸಲು ಯೋಜಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಶಸ್ತ್ರ ಪಡೆಗಳ ಮೆರವಣಿಗೆಯಲ್ಲಿ ಸೇರಲಿದ್ದಾರೆ ಎಂದು ಕೃಷಿ ಮುಖಂಡರು ಹೇಳಿದ್ದಾರೆ.

