ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಿದ ಬಿಎಸ್ವೈ…!
ಶಿವಮೊಗ್ಗ ಗಣಿಪ್ರದೇಶದಲ್ಲಿ ನಡೆದಿ ಜಿಲಿಟಿನ್ ಸ್ಪೋಟದಲ್ಲಿ 6 ಜನ ದುರ್ಮಣ ಹೊಂದಿದ್ದು ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಅಕ್ರಮಗಣಿಗಾರಿಕೆ ನಡೆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳಿಗೆ ಕಡಿವಾಣ ಹಾಕಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿದ ಸಿಎಂ ಬಿಎಸ್ವೈ, ಅಕ್ರಮ ಗಣಿಗಾರಿಕೆ ನಡೆದರೆ ನೇರವಾಘಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಇದು ಕೂಡ ನಿಲ್ಲಬೇಕು. ಅರ್ಜಿ ಸಲ್ಲಿಸಿ ನಂತರ ಗಣಿಗಾರಿಕೆಗೆ ಅನುಮತಿ ಪಡೆಯಬೇಕು. ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅನುಮತಿ ನೀಡಬೇಕು” ಎಂದಿದ್ದಾರೆ. ಸದ್ಯ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಇದಕ್ಕೂ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚಿಲಾಗಿದೆ.
ಇನ್ನೂ ಶಿವಮೊಗ್ಗ ಜಿಲಿಟಿನ್ ಸ್ಪೋಟದ ಘಟನೆಗೆ ಸಂಬಂಧಿಸಿದಂತೆ ತಪ್ಪಿಕಸ್ಕರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮದ ಜನ ಆಗ್ರಹಿಸಿದ್ದಾರೆ. ಜನವರಿ 21ರ ರಾತ್ರಿ ಗಣಿಪ್ರದೇಶದಲ್ಲಿ ಭಾರಿ ಪ್ರಮಾಣದ ಜಿಲಿಟಿನ್ ಸ್ಪೋಟಗೊಂಡಿದ್ದು ಅಕ್ಕಪಕ್ಕದ ಮನೆಗಳು ಸಂಪೂರ್ಣ ಹಾಳಾಗಿವೆ. ಗೋಡೆಗಳು ಬಿರುಕು ಬಿಟ್ಟಿದ್ದು ಕಿಟಕಿ, ಬಾಗಿಲುಗಳು ಒಡೆದು ಹೋಗಿವೆ. ಜನ ರಾತ್ರಿ ಇಡೀ ಆತಂಕದಲ್ಲಿ ಕಾಲಕಳೆಯುಂವತ ಸ್ಥಿತಿ ನಿರ್ಮಾಣವಾಗಿತ್ತು. ಜಾನುವಾರಗಳು ಸ್ಪೋಟದ ಶಬ್ದಕ್ಕೆ ಗ್ರಾಮ ಬಿಟ್ಟು ಹೋಗಿದ್ದು ಗ್ರಾಮಸ್ಥರು ಜಾನುವಾರಗಳ ಹುಡುಕಾಟ ನಡೆಸಿದ್ದಾರೆ.
ಇನ್ನೂ ಸಿಎಂ ಯಡಿಯೂರಪ್ಪ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿತಾ ಸಮಿತಿ ರಚನೆ ಮಾಡಲಾಗಿದ್ದು ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.