‘ನಾವೆಲ್ಲರೂ ಅವರೊಂದಿಗೆ ಇದ್ದೇವೆ’ – ಹಳ್ಳಿಹಕ್ಕಿಗೆ ಬಿಸಿ ಪಾಟೀಲ್ ಟಾಂಗ್

ಪಕ್ಷಾಂತರಗೊಂಡು ಸಚಿವಸ್ಥಾನವೂ ಕೈಗೆಟಕದ ಹಳ್ಳಿಹಕ್ಕಿಗೆ ಕೃಷಿ ಸಚಿವ ಬಿಸಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಹೌದು… ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದ ಹಳ್ಳಿಹಕ್ಕಿಗೆ ಭಾರೀ ಮುಖಭಂಗ ಎದುರಿಸುವಂತಾಗಿದೆ. ಪಕ್ಷ ಬಿಟ್ಟು ಜೊತೆಗೆ ಹೋದವರೇ ನನ್ನ ಕೈಹಿಡಿದಿಲ್ಲ ಎನ್ನುವ ಮಾತುಗಳನ್ನು ಹಳ್ಳಿ ಹಕ್ಕಿ ಹಲವಾರು ಬಾರಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಾಗಿ ಮಾತನಾಡಿದ ಬಿಸಿ ಪಾಟೀಲ್ ” ಯಾರನ್ನೂ ಯಾರೂ ಲೀಡ್ ಮಾಡಿಲ್ಲ, ಯಾರಿಗೆ ಯಾರು ಲೀಡರ್ ಆಗಲು ಆಗುವುದಿಲ್ಲ ಅವರಷ್ಟಕ್ಕೆ ಅವರೇ ಲೀಡರ್” ಎಂದು ಎಚ್. ವಿಶ್ವನಾಥ್ ಗೆ ಕೃಷಿ ಸಚಿವ ಬಿಸಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿರುವ ಅವರು ಕೊತ್ತಲವಾಡಿಯಲ್ಲಿ ಪಾರ್ವತಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಬಿಸಿ ಪಾಟೀಲ್, ವಿಶ್ವನಾಥ್ ಒಬ್ಬಂಟಿಯಾಗಿಲ್ಲ ಅವರು ಗಟ್ಟಿಯಾಗಿದ್ದಾರೆ. ಅವರ ಜೊತೆ ಎಲ್ಲರೂ ಇದ್ದಾರೆ” ಎಂದು ತಿಳಿದ್ದಾರೆ.

ಇತ್ತೀಚೆಗೆ ತಮ್ಮ ಅಸಮಧಾನ ಹೊರಹಾಕಿದ್ದ ಹಳ್ಳಿಹಕ್ಕಿ “ ನಾನು ಹದಿನೇಳು ಜನರ ಟೀಂ ಕಟ್ಟಿ ಮುನ್ನಡೆಸಿದ್ದೆ, ಸ್ನೇಹಿತರು ನನ್ನು ಒಬ್ಬಂಟಿಯಾಗಿ ಮಾಡಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದರು. ಇದಕ್ಕೆ ಪ್ರತಿಕ್ರಯಿಸಿದ್ದ ಬಿಸಿ ಪಾಟೀಲ್ “ ನಾನು ಅವರಿಗಿಂತ ಸಣ್ಣವನು ಅವರಿಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ. ನಾವೆಲ್ಲಾ ವಿಶ್ವನಾಥ್ ಹಿಂದೆ ಇದ್ದೇವೆ ಆಯ್ತಾ” ಎಂದು ವ್ಯಂಗ್ಯವಾಗಿಡಿದ್ದರು.

“ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಕಾನೂನು ತೊಡಕಿದೆ.  ಸುಪ್ರೀಂ ಕೋರ್ಟ್ ಆದೇಶ ಕೂಡ ಅವರ ವಿರುದ್ದ ಇದೆ. ಮಾತ್ರವಲ್ಲದೇ ಅವರು ಜನರಿಂದ ಆಯ್ಕೆಯಾಗಿಲ್ಲ. ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡವರು. ಉಳಿದ ಎಂಎಲ್ಸಿಗಳು ಜನಪ್ರತಿನಿಧಿಗಳಿಂದ ಆಯ್ಕೆಯಾದವರು ಹಾಗಾಗಿ ಅವರಿಗೆ ಮಂತ್ರಿ ಸ್ಥಾನ ನೀಡಲು ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ವಿಶ್ವನಾಥ್ ನಾಮ ನಿರ್ದೇಶನಗೊಂಡಿರುವುದರಿಂದ ಮಂತ್ರಿ ಸ್ಥಾನ ದೊರೆತಿಲ್ಲ”  ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights