‘ಮೇಕೆ ಮಾಂಸದ ಜೊತೆಗೆ ದನದ ಮಾಂಸ ಮಿಕ್ಸ್’ – ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪ!

ಗೋಹತ್ಯೆ ನಿಷೇಧ ಮಸೂದೆ ಜಾರಿಯಾದರೂ ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷೇಧವಾಗಿಲ್ಲ ಎಂದು ಮಂಗಳೂರು ಉತ್ತರ ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ.

ಹೌದು… ವಿಧಾನಸಭೆಯಲ್ಲಿ ಪ್ರಶ್ನೋತ್ತರ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಭರತ್ ಶೆಟ್ಟಿ, ಮಂಗಳೂರಿನಲ್ಲಿ ಮೇಕೆ ಮಾಂಸದ ಜೊತೆಗೆ ದನದ ಮಾಂಸ ಸೇರಿಸಿ ಕೊಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇದ್ದು, ಗೋಹತ್ಯೆ ಕಾಯ್ದೆ ಜಾರಿಗೆ ಬಂದ ಬಳಿಕ ಪಶು ವೈದ್ಯರ ಅಗತ್ಯ ಹೆಚ್ಚಾಗಿದೆ. ಮಟನ್ ಮಾಂಸದ ಜೊತೆಗೆ ದನದ ಮಾಂಸ ಮಿಕ್ಸ್ ಮಾಡಲಾಗುತ್ತದೆ ಎಂಬ ಆರೋಪ ಇದೆ. ಅಲ್ಲದೆ ಕೇರಳ ಭಾಗದಿಂದ ದನದ ಮಾಂಸ ಜಿಲ್ಲೆಗೆ ಸಾಗಾಟ ಆಗುತ್ತಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಲು ಪಶು ವೈದ್ಯರ ಅಗತ್ಯ ಇದೆ ಎಂದು ಸಭೆಯನ್ನು ಶಾಸಕ ಒತ್ತಾಯಿಸಿದರು.

ಈ ವೇಳೆ ಶಾಸಕ ಭರತ್ ಶೆಟ್ಟಿ ಪಶು ವೈದ್ಯರ ಅಗತ್ಯ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌, ರಾಜ್ಯದಲ್ಲಿ ಶೇ 50 ರಷ್ಟು ಪಶುವೈದ್ಯರ ಹುದ್ದೆ ಖಾಲಿ ಇದೆ. ಕೋವಿಡ್ ಕಾರಣಕ್ಕಾಗಿ ನೇಮಕಾತಿ ವಿಳಂಬ ಆಗಿದೆ. ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಸಚಿವರು ಭರವಸೆ ಕೊಟ್ಟಿದ್ದಾರೆ.

Spread the love

Leave a Reply

Your email address will not be published. Required fields are marked *