ಫೆ.15 ರಂದು ದಿಯಾ ಮಿರ್ಜಾರನ್ನು ವರಿಸಲಿರುವ ಉದ್ಯಮಿ ವೈಭವ್ ರೇಖಿ!

ಬಾಲಿವುಡ್ ನಟಿ ದಿಯಾ ಮಿರ್ಜಾ ತನ್ನ ಗೆಳೆಯ ಉದ್ಯಮಿ ವೈಭವ್ ರೇಖಿಯೊಂದಿಗೆ ವಿವಾಹವಾಗಲಿದ್ದಾರೆ. ಫೆ.15ರಂದು ನಡೆಯಲಿರುವ ಈ ವಿವಾಹ ಸಮಾರಂಭದಲ್ಲಿ ಕೆಲ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಇವರ ಡೇಟಿಂಗ್ ವದಂತಿಗಳು ಕಳೆದ ವರ್ಷ ಕೇಳಿಬಂದಿತ್ತಾದರೂ ದಿಯಾ ಈ ಬಗ್ಗೆ ಮಾತನಾಡಿರಲಿಲ್ಲ. ಸದ್ಯ ಅದೇ ಉದ್ಯಮಿಯನ್ನು ಮದುವೆಯಾಗುತ್ತಿದ್ದಾರೆ. 

ದಿಯಾ ಈ ಹಿಂದೆ ಉದ್ಯಮಿ ಸಾಹಿಲ್ ಸಂಘ ಅವರನ್ನು 2014 ರಲ್ಲಿ ಮದುವೆಯಾಗಿದ್ದರು. ಇವರಿಬ್ಬರು ಮದುವೆಯಾಗಿ ಐದು ವರ್ಷಗಳ ನಂತರ ಆಗಸ್ಟ್ 2019 ರಲ್ಲಿ  ದೂರವಾದ್ರು. ಆಗಸ್ಟ್ 2019 ರಲ್ಲಿ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘ ಅವರು ಸೋಶಿಯಲ್ ಮೀಡಿಯಾದಲ್ಲಿ ತಾವು ದೂರವಾಗಿರುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈಗಲೂ ಇವರಿಬ್ಬರು ಅವರು ಸ್ನೇಹಿತರಾಗಿ ಉಳಿದಿದ್ದಾರೆ.

ಆದರೀಗ ಫೆಬ್ರವರಿ 15 ರಂದು ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ವಿವಾಹವಾಗಲಿದ್ದಾರೆ. ಅವರು ಕೆಲವೇ ಕುಟುಂಬ ಸದಸ್ಯರೊಂದಿಗೆ ಸರಳ ವಿವಾಹವಾಗಲು ನಿರ್ಧಾರಿಸಿದ್ದಾರೆನ್ನಲಾಗುತ್ತಿದೆ. ಹೀಗಾಗಿ ಕುಟುಂಬಸ್ಥರಿಗೆ, ಆಪ್ತರಿಗೆ, ಸ್ನೇಹಿತರಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಸದ್ಯ ದಿಯಾ ಮಿರ್ಜಾ ತನ್ನ ತೆಲುಗು ಚಿತ್ರ ವೈಲ್ಡ್ ಡಾಗ್ ನಲ್ಲಿ ನಿರತರಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights