ವಿದೇಶಿ ಪೌರತ್ವಕ್ಕಾಗಿ ಮುಂದಾದವರ ವಿಶ್ವ ಪಟ್ಟಿಯಲ್ಲಿ ಭಾರತೀಯ ಶ್ರೀಮಂತರೇ ಮೊದಲು!

ವಿದೇಶಗಳು ವಾಸಿಸಲು ಅಥವಾ ವಿದೇಶಿ ಪೌರತ್ವ ಪಡೆಯುವುದಕ್ಕಾಗಿ ಮಾಹಿತಿ ಕೇಳಿರುವ ವಿಶ್ವದ ದೇಶಗಳಲ್ಲಿ ಭಾರತೀಯರೇ ಹೆಚ್ಚು ಮಂದಿ ಎಂದು ಹೆನ್ಲಿ ಎಂಡ್ ಪಾಟ್ನರ್ಸ್ ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.

ಕೊರೊನಾ ಸಂಕಷ್ಟದಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಗಳು ಕಡಿಮೆಯಾಗಿದ್ದರೂ ಸಹ, ವಿದೇಶದಲ್ಲಿ ವಾಸಿಸುವ ಮತ್ತು ಅಲ್ಲಿನ ಪೌರತ್ವ ಪಡೆದುಕೊಳ್ಳಲು ಮುಂದಾಗಿರುವವರು ಮತ್ತು ಆ ಬಗ್ಗೆ ಮಾಹಿತಿಗಾಗಿ ವಿಚಾರಿಸಿದವರಲ್ಲಿ 2019ಕ್ಕಿಂತ 2020ರಲ್ಲಿ ಭಾರತೀಯರ ಶ್ರೀಮಂತರ ಸಂಖ್ಯೆ ಹೆಚ್ಚಾಗಿದ್ದು, ವಿದೇಶ ಪೌರತ್ವ ಪಡೆಯಲು ಮುಂದಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಹೆನ್ಲಿ ಸಂಸ್ಥೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹೂಡಿಕೆಗಳ ಮೂಲಕ ವಾಸಿಸಲು ಅಥವಾ ಹೂಡಿಕೆ ಮೂಲಕ ಪೌರತ್ವ ಪಡೆಯಲು ಸಾಧ್ಯತೆಯ ಕುರಿತು ವಿಚಾರಿಸಿದ ಭಾರತೀಯರ ಸಂಖ್ಯೆ 2019ಗೆ ಹೋಲಿಸಿದಾಗ 2020ರಲ್ಲಿ ಅಧಿಕವಾಗಿದೆ ಎಂದು ಈ ನಿಟ್ಟಿನಲ್ಲಿ ಸಹಾಯ ಒದಗಿಸುವ ಜಾಗತಿಕ ಸಂಸ್ಥೆಯಾಗಿರುವ ಹೆನ್ಲಿ ಎಂಡ್ ಪಾಟ್ನರ್ಸ್ ಹೇಳಿದೆ.

ಭಾರತ ದ್ವಿಪೌರತ್ವ ಹೊಂದುವುದಕ್ಕೆ ಅನುಮತಿ ನೀಡದೇ ಇರುವುದರಿಂದ ಹೂಡಿಕೆ ಮೂಲಕ ಇತರ ದೇಶಗಳ ಪೌರತ್ವ ಪಡೆದಲ್ಲಿ ಭಾರತೀಯ ಪಾಸ್‍ಪೋರ್ಟ್ ಅನ್ನು ಕೈಬಿಡಬೇಕಾಗುತ್ತದೆ.

ಈ ರೀತಿ ಇತರ ದೇಶಗಳ ಪೌರತ್ವ ಪಡೆಯಲು ವಿಚಾರಿಸಿದ ಅಮೆರಿಕನ್ನರ ಸಂಖ್ಯೆ ಕೂಡ ಕೋವಿಡ್ ಹಾಗೂ ರಾಜಕೀಯ ಬಿಕ್ಕಟ್ಟಿನಿಂದಾಗಿ ಏರಿಕೆಯಾಗಿದ್ದು 2019ರಲ್ಲಿ ಆರನೇ ಸ್ಥಾನದಲ್ಲಿದ್ದ ಅಮೆರಿಕಾ 2020ರಲ್ಲಿ ಎರಡನೇ ಸ್ಥಾನಕ್ಕೇರಿತ್ತು.

ಹೂಡಿಕೆ ಮೂಲಕ ವಾಸಕ್ಕಾಗಿ ಹೆಚ್ಚಿನ ಜನರು ಕೆನಡಾ, ಪೋರ್ಚುಗಲ್ ಮತ್ತು ಆಸ್ಟ್ರಿಯಾ ಆಯ್ಕೆ ಮಾಡಲು ಬಯಸಿದ್ದರೆ ಪೌರತ್ವಕ್ಕಾಗಿ ಆಸ್ಟ್ರಿಯಾ, ಮಾಲ್ಟಾ ಮತ್ತು ಟರ್ಕಿ ದೇಶಗಳಿಗೆ ಹೆಚ್ಚು ಬೇಡಿಕೆಯಿತ್ತು ಎಂದು ವರದಿ ತಿಳಿಸಿದೆ.

Read Also: ಭಾನುವಾರ ತಮಿಳುನಾಡಿಗೆ ಮೋದಿ; ಪ್ರಧಾನಿ ವಿರುದ್ಧ ಶನಿವಾರವೇ #GoBackModi ಟ್ರೆಂಡಿಂಗ್!‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights