ಮಗಳು ಐಶ್ವರ್ಯ ವಿವಾಹ ಸಂಭ್ರಮದಲ್ಲಿ ಡಿಕೆ ಶಿವಕುಮಾರ್ : ನೂರಾರು ಗಣ್ಯರಿಂದ ಶುಭಹಾರೈಕೆ!

ಪ್ರೇಮಿಗಳ ದಿನದಂದು ಡಿಕೆ ಶಿವಕುಮಾರ್ ಪುತ್ರಿಯ ಕಲ್ಯಾಣ ನೆರವೇರುತ್ತಿದೆ. ಪುತ್ರಿ ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ಅದ್ದೂರಿ ವಿವಾಹ ನೆರವೇರುತ್ತಿದೆ. ಮದುವೆಗೆ ಆಗಮಿಸಿದ ಗಣ್ಯರು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ರಾಜಕೀಯ ಕ್ಷೇತ್ರ, ಸಿನಿಮಾ ಕ್ಷೇತ್ರದಿಂದ, ಬಿಜಿನೆಸ್ ಮ್ಯಾನ್ ಗಳು, ಆಪ್ತರು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನ ಮದುವೆಗೆ ಆಗಮಸಿದ್ದಾರೆ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್ ಮುನಿಯಪ್ಪ, ಟಿಎ ನಾರಾಯಣಗೌಡ, ಸಂಪತ್ ರಾಜ್, ಅಶೋಕ್ ಖೇಣಿ, ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಸುಧಾಕರ್, ಆರ್ ವಿ ದೇಶ್ಪಾಂಡೆ, ಶಾಮನೂರು ಶಿವಶಂಕರಪ್ಪ, ಕುಮಾರ್ ಬಂಗಾರಪ್ಪ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭಕೋರಿದರು.

ಇನ್ನೂ ನಟ ಪುನೀತ್ ರಾಜಕುಮಾರ್ ಕುಟುಂಬ ಸಮೇತ ಬಂದು ಶುಭ ಕೋರಿದರು. ಮಠಾಧೀಶರೂ ಕೂಡ ಮದುವೆ ಸಮಾರಮಭದಲ್ಲಿ ಭಾಗವಹಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights