ಪಂಜಾಬ್‌ ಸ್ಥಳೀಯ ಸಂಸ್ಥೆಗಳನ್ನು ಬಾಚಿಕೊಂಡ ಕಾಂಗ್ರೆಸ್‌; ನೆಲೆಯಿಲ್ಲದೆ ಧೂಳಿಪಟವಾದ BJP!

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಂಜಾಬ್‌ ಮುಂಚೂಣಿಯಲ್ಲಿದೆ. ಹೋರಾಟದ ನಡುವೆಯೂ ಪಂಜಾಬ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಸಿದ್ದು, ಬಿಜೆಪಿಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಸೋಲಿಸುವ ಮೂಲಕ ಇಡೀ ಪಂಜಾಬ್‌ ಕೃಷಿ ಕಾಯ್ದೆಗಳಿಗೆ ವಿರುದ್ದವಾಗಿದೆ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದೆ.

ಪಂಜಾಬ್‌ನ 08 ಮುನ್ಸಿಪಲ್ ಕಾರ್ಪೋರೇಷನ್‌ ಮತ್ತು 109 ಪುರಸಭೆಗಳಿಗೆ ನಡೆದ ಚುನಾವಣೆಯನ್ನು ಪಂಜಾಬಿಗರು ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳಲ್ಲಿ ಮತ ಚಲಾಯಿಸಿದ್ದು, ಕೈ ಪಕ್ಷ ಭರ್ಜರಿ ಗೆಲವು ಸಾಧಿಸಿದೆ. ಅಂತೆಯೇ ಬಿಜೆಪಿಯನ್ನು ಧೂಳಿಪಟ ಮಾಡಿದ್ದಾರೆ.

08 ಮುನ್ಸಿಪಲ್ ಕಾರ್ಪೋರೇಷನ್‌ಗಳ ಪೈಕಿ 07 ಕಾರ್ಪೋರೇಷನ್‌ಗಳ ಮತ ಎಣಿಕೆ ನಡೆದಿದ್ದು, 07ರಲ್ಲಿಯೂ ಕಾಂಗ್ರೆಸ್‌ ಜಯಭೇಟಿ ಭಾರಿಸಿದೆ. ಎಸ್‌ಎಎಸ್‌ ನಗರದ ಕಾರ್ಪೋರೇಷನ್‌ನ ಮತ ಎಣಿಕೆಯು ಫೆಬ್ರವರಿ 18ರವರೆಗೆ ನಡೆಯುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಪುರಸಭೆಗಳ ಪೈಕಿ ಬಹುಪಾಲು ಪುರಸಭೆಗಳು ಕಾಂಗ್ರೆಸ್‌ ತೆಕ್ಕೆಗೆ ಹೋಗಿವೆ.

ಫೆರೋಜೆಪುರ ಮುನ್ಸಿಪಲ್ ಕೌನ್ಸಿಲ್‌ನ 33 ಸ್ಥಾನಗಳಲ್ಲಿ 33 ಅನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. 100% ಸ್ವೀಪ್‌ ಔಟ್‌ ಮಾಡಿದೆ. ಈ ಹಿಂದೆ ಈ ರೀತಿಯಲ್ಲಿ ಯಾವ ಪಕ್ಷವೂ ಗೆಲುವು ಸಾಧಿಸಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಪರಮಿಂದರ್ ಸಿಂಗ್ ಪಿಂಕಿ ಹೇಳಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿದ್ದ ಪಠಾಣ್‌ಕೋಟ್‌ನ ಪುರಸಭೆಯಲ್ಲಿಯೂ ಬಿಜೆಪಿಗೆ ನೆಲಕಚ್ಚಿದೆ. ಅಲ್ಲಿ  50 ಸ್ಥಾನಗಳ ಪೈಕಿ ಕಾಂಗ್ರೆಸ್‌ 37 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 11 ಸ್ಥಾನಗಳನ್ನು ಗೆದ್ದು ಸೋಲುಂಡಿದೆ.

ಜೈತು ಪರಸಭೆಯ 17 ಸ್ಥಾನಗಳಲ್ಲಿ ಕಾಂಗ್ರೆಸ್ 7, ಅಕಾಲಿ ದಳ 3, ಪಕ್ಷೇತರರು 4 ಸ್ಥಾನಗಳಲ್ಲಿ ಜಯಿಸಿದ್ದಾರೆ.

ಸುಜಾನ್ ಪುರ್‌ನ 15 ಸ್ಥಾನಗಳಲ್ಲಿ ಕಾಂಗ್ರೆಸ್ 8 ನ್ನು ಗೆದ್ದರೆ, ಬಿಜೆಪಿ 5 ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಜಯಿಸಿದ್ದಾರೆ.

ಕೋಠಾಕ್‌ಪುರದ 21 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 13 ವಾರ್ಡ್‌ಗಳನ್ನು ಗೆದ್ದಿದ್ದು, ಬಿಜೆಪಿ 5 ಮತ್ತು ಆಪ್ 3 ವಾರ್ಡ್‌ಗಳಲ್ಲಿ ಜಯಸಿದ್ದಾರೆ.

ಫರೀದ್‌ಕೋಟ್ 25 ವಾರ್ಡ್‌ಗಳಲ್ಲಿ ಕಾಂಗ್ರೆಸ್ 16, ಅಕಾಲಿದಳ 7, ಆಪ್ 1 ಮತ್ತು ಪಕ್ಷೇತರರು 1 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.

ದೇರಾ ಬಸ್ಸಿಯ 19 ರಲ್ಲಿ ಕಾಂಗ್ರೆಸ್ 13 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಬಿಜೆಪಿ 1 ಕ್ಕೆ ಸೀಮಿತವಾಗಿದೆ.

ಫೈಜಿಲ್ಕದ 19 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ರಲ್ಲಿ ಬಿಜೆಪಿ ಮತ್ತು 2 ರಲ್ಲಿ ಆಪ್ ಜಯಿಸಿದೆ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಎಂಟು ಮಹಾನಗರ ಪಾಲಿಕೆಗಳು ಮತ್ತು 109 ಪುರಸಭೆಗಳ ಚುನಾವಣೆಗೆ ಒಟ್ಟು 15,305 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಅವರಲ್ಲಿ ನಾಮಪತ್ರ ವಾಪಸಾತಿಯ ನಂತರ 9,222 ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿ ಚುನಾವಣೆ ಎದುರಿದ್ದರು.

ಅವರಲ್ಲಿ 2,822 ಮಂದಿ ಸ್ವತಂತ್ರರು. ಉಳಿದಂತೆ, ಆಡಳಿತಾರೂಢ ಕಾಂಗ್ರೆಸ್‌ನ 2,037, ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) 1,569 ಅಭ್ಯರ್ಥಿಗಳಿದ್ದಾರೆ. ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಎಎಪಿಯ 1,606 ಅಭ್ಯರ್ಥಿಗಳಿದ್ದಾರೆ. ಬಿಜೆಪಿಯ 1,003 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಇದನ್ನೂ ಓದಿ: ರೈತ ಮುಖಂಡರ ಮೇಲೆ FIR: ರೈತರ ನೆರವಿಗೆ 70 ವಕೀಲರನ್ನು ನೇಮಿಸಿದ ಪಂಜಾಬ್‌ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights