ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಮನೆ ಮಾರಿದ ವೃದ್ಧ ಆಟೋ ಡ್ರೈವರ್ಗೆ 24 ಲಕ್ಷ ದೇಣಿಗೆ ಸಂಗ್ರಹ!

ತನ್ನ ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಮುಂಬೈನ ವೃದ್ಧ ಆಟೋ ಚಾಲಕ ಕ್ರೌಡ್‌ಫಂಡಿಂಗ್ ಮೂಲಕ 24 ಲಕ್ಷ ದೇಣಿಗೆ ಪಡೆದಿದ್ದಾನೆ. ‘ಹ್ಯೂಮನ್ಸ್ ಆಫ್ ಬಾಂಬೆ’ ವೃದ್ಧ ದೇಸರಾಜ್ ಅವರ ಹೃದಯ ಕದಡುವ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ದೇಸರಾಜ್ ವೈರಲ್ ಆಗಿದ್ದಾರೆ.

ದೇಸರಾಜ್ ಅವರ ಇಬ್ಬರು ಪುತ್ರರ ಮರಣದ ನಂತರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ವಯಸ್ಸಾದ ಹೆಗಲ ಮೇಲೆ ಬಿದ್ದಿತು. ಅವರ ಸೊಸೆ ಮತ್ತು ಅವರ ನಾಲ್ಕು ಮಕ್ಕಳ ಜವಾಬ್ದಾರಿ ಅವರ ಹೆಗಲ ಮೇಲೆ ಬಿದಿದೆ.

ದೇಸರಾಜ್ ಕುಟುಂಬವನ್ನು ಸಾಗಿಸಲು ತಮ್ಮ ಆಟೋರಿಕ್ಷಾವನ್ನು ಚಾಲನೆ ಮಾಡಲು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಬಹುಪಾಲು ಗಳಿಕೆ ಮೊಮ್ಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಿಸಲು ಹೋಯಿಗುತ್ತಿತ್ತು. ಅವರ ಮೊಮ್ಮಗಳು ತನ್ನ 12 ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಶೇಕಡಾ 80 ರಷ್ಟು ಪಡೆದು ಬಿ.ಎಡ್ ಕೋರ್ಸ್‌ಗಾಗಿ ದೆಹಲಿಗೆ ಪ್ರಯಾಣಿಸಲು ಬಯಸಿದ್ದಳು. ಆದರೆ ಈ ವೆಚ್ಚ ದೇಸರಾಜ್ ಅವರಿಗೆ ಭರಿಸಲಾಗುವುದಿಲ್ಲ ಎಂದು ತಿಳಿದಿತ್ತು. ಆದ್ದರಿಂದ ಅವರು ತನ್ನ ಮನೆಯನ್ನು ಮೊಮ್ಮಗಳ ಶಿಕ್ಷಣಕ್ಕಾಗಿ ಮಾರಿದರು.

ದೇಸರಾಜ್ ಅವರ ನಿಸ್ವಾರ್ಥ ಕಾರ್ಯದ ಕಥೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಸಾವಿರಾರು ಹೃದಯಗಳನ್ನು ಮುಟ್ಟಿದೆ. ಎಲ್ಲಾ ಭಾಗಗಳಿಂದ ಸಹಾಯದ ಕೊಡುಗೆಗಳನ್ನು ಸುರಿಯಲಾಗುತ್ತಿದೆ. ಅವರ ಕಥೆಯನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ನ ಅರ್ಚನಾ ಡಾಲ್ಮಿಯಾ ಅವರು ಮುಂಬೈ ನಿವಾಸಿಗಳಿಗೆ ಆಟೋ ಡ್ರೈವರ್ ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಈ ಪೋಸ್ಟ್ ಅನ್ನು ಮಿಲಿಂದ್ ಡಿಯೋರಾ ಕೂಡ ರಿಟ್ವೀಟ್ ಮಾಡಿದ್ದಾರೆ.

ಗುಂಜನ್ ರಟ್ಟಿ ಎಂಬ ಫೇಸ್‌ಬುಕ್ ಬಳಕೆದಾರರು ದೇಸರಾಜ್‌ಗಾಗಿ ನಿಧಿಸಂಗ್ರಹವನ್ನು ಪ್ರಾರಂಭಿಸಿದರು, ಇದು 20 ಲಕ್ಷದ ಗುರಿಯನ್ನು ಮೀರಿದೆ. ಕ್ರೌಡ್ ಫಂಡಿಂಗ್ ಉಪಕ್ರಮಕ್ಕೆ ಧನ್ಯವಾದಗಳನ್ನು ಹೇಳಿದ ದೇಸರಾಜ್ 24 ಲಕ್ಷಕ್ಕೆ ಚೆಕ್ ಸ್ವೀಕರಿಸಿದ್ದಾರೆ ಎಂದು ಹ್ಯೂಮನ್ಸ್ ಆಫ್ ಬಾಂಬೆ ಬಹಿರಂಗಪಡಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights