ಮಂಡ್ಯ ಮನ್ಮುಲ್ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟ : ಬಿಜೆಪಿಗೆ ಭಾರೀ ಮುಖಭಂಗ

ಮಂಡ್ಯ ಮನ್ಮುಲ್ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ೮-೮ ಮತ ಪಡೆದು ಸಮಬಲ ಸಾಧಿಸಿದೆ. ಲಾಟರಿಯಲ್ಲಿ ಜೆಡಿಎಸ್ ಗೆ ಮನ್ಮುಲ್ ಅಧಿಕಾರ ಗದ್ದುಗೆ‌ ಒಲಿದಿದೆ.

ಬಿಜೆಪಿ ಪಕ್ಷಕ್ಜೆ ಕೈ ಕೊಟ್ಟವರ್ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಣ್ಣಿಟ್ಟಿದ್ದ ಎಸ್ಪಿ ಸ್ವಾಮಿಗೆ ಶಾಕ್‌ ಕೊಟ್ಟಂತಾಗಿದೆ. ಎಸ್ಪಿ ಸ್ವಾಮಿ ಸೇರಿ ೯ ನಿರ್ದೇಶಕರಿದ್ರು ಬಿಜೆಪಿಗೆ ಅಧಿಕಾರ ಕೈ ತಪ್ಪಿದೆ.

೭ ಸ್ಥಾನಗಳಿದ್ರು ಮತ್ತೊಂದು ಮತ ಪಡೆದು ಬಿಜೆಪಿ ಆಸೆ ಭಗ್ನಗೊಳಿಸಿದೆ ಜೆಡಿಎಸ್ ಪಡೆ. ೧೨ ಜನರ ನಿರ್ದೇಶಕ ಚುನಾವಣೆಯಲ್ಲಿ ೮ ಜನರು ಜೆಡಿಎಸ್ ಬೆಂಬಲಿತರಾಗಿ ಗೆದಿದ್ರು. ೧ ಬಿಜೆಪಿ, ೩ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ರು. ೮ ಜನ ಜೆಡಿಎಸ್ ಬೆಂಬಲಿತರಲ್ಲಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಎಸ್ಪಿ ಸ್ವಾಮಿ ಬಿಜೆಪಿಗೆ ಸೇರ್ಪಡೆಯಾಗಿದ್ರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ೧೨ ನಿರ್ದೇಶಕರ ಮತ ಸೇರಿ ೧ ಎಆರ್,೧ ಡಿ.ಆರ್, ಹಾಗೂ ೧ ಕೆಎಂಎಫ್ ನಿರ್ದೇಶಕರು ಸೇರಿ ಒಟ್ಟು೧೬ ಮತ ಚಲಾವಣೆಯಾಗಿದ್ದವು. ೨ ಬಿಜೆಪಿ,೩ ಕಾಂಗ್ರೆಸ್,ಹಾಗೂ ೧ ಸರ್ಕಾರ ನಾಮಿನಿ,ಸೇರಿ ೩ ನಿರ್ದೇಶಕ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲು ಫ್ಲ್ಯಾನ್ ಮಾಡಿತ್ತು. ಆದ್ರೆ ಮತದಾನದಲ್ಲಿ ಯಾರೋ ಒಬ್ಬರು ಕೈ ಕೊಟ್ಟಿದ್ರಿಂದ ೮-೮ ಸಮಬಲ ಸಾಧಿಸಿದಂತಾಗಿದೆ.

ಹೀಗಾಗಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಲಾಟರಿಯಲ್ಲಿ ಜೆಡಿಎಸ್ ಗೆ ಮನ್ಮುಲ್ ಅಧಿಕಾರ ಗದ್ದುಗೆ‌ ಒಲಿದಿದೆ. ಎಸ್ಪಿ ಸ್ವಾಮಿಗೆ ಮನ್ಮುಲ್ ಅಧ್ಯಕ್ಷ ಗಾದಿ ಕೈ ತಪ್ಪಿ, ಮಂಡ್ಯ ಮನ್ಮುಲ್ ನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾಮಚಂದ್ರು ಆಯ್ಕೆಯಾಗಿದ್ದಾರೆ.

ಈ ಮೂಲಕ ಮನ್ಮುಲ್ ಅಧಿಕಾರ ಹಿಡಿಯಲು ಫ್ಲ್ಯಾಮ್ ಮಾಡಿದ್ದ ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights