ಆರ್ ಆರ್ ನಗರದಲ್ಲಿ ಅರಳಿ ಕಮಲ : ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ಏನು?
ಬಹುನಿರೀಕ್ಷತ ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಎರಡೂ ಕ್ಷೇತ್ರದಲ್ಲಿ ಕಮಲ ಅರಳಿ ಭರ್ಜರಿ ಜಯ ಸಾಧಿಸಿದೆ.
ಆರ್ ಆರ್ ನಗರದಲ್ಲಿ ಬಿಜೆಪಿಗೆ ಜನ ಗೆಲುವಿನ ಪ್ರಸಾದ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,25,734 ಜನ ಮತನೀಡಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 67789 ಮತ ನೀಡಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10251 ಮತಪಡೆದಿದ್ದಾರೆ. 58 ಸಾವಿರ ಮತಗಳ ಅಂತರದಿಂದ ಮುನಿರತ್ನ ಗೆಲುವು ಸಾಧಿಸಿದ್ದಾರೆ.
ಅಷ್ಟಕ್ಕೂ ಆರ್ ಆರ್ ನಗರದಲ್ಲಿ ಮುನಿರತ್ನ ಜಯ ಸಾಧಿಸಲು ಕಾರಣವೇನು..?
ಕೊರೊನಾ ಸಂದರ್ಭದಲ್ಲಿ ಮಾಡಿದ ಕೆಲಸ ಮುನಿರತ್ನ ಅವರನ್ನು ಕೈಹಿಡಿಯಲು ಸಾಧ್ಯವಾಯ್ತು. ಇದೇ ಕಾರಣದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆರ್ ಆರ್ ನಗರದಲ್ಲಿ ಪತಯಾಚನೆ ಕೂಡ ಮಾಡಿದ್ದರು. ಹೀಗಾಗಿ ಮುನಿರತ್ನ ಅವರಿಗೆ ಹೆಚ್ಚಿನ ಮತಗಳಿಕೆಗೆ ಕಾರಣವಾಯ್ತು. ಹಳೆಯ ಹುಲಿಯಾದ ಮುನಿರತ್ನ ಕ್ಷೇತ್ರದಲ್ಲಿ ತಮ್ಮದೇ ಆದರ ವರ್ಚಸ್ಸು ಇತ್ತು. ಮಾತ್ರವಲ್ಲದೇ ನಾನಾ ಭರವಸೆಗಳನ್ನು ಸಿಎಂ ಪಕ್ಷದ ಗೆಲುವಿಗೆ ನೀಡಿದ್ದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭರವಸೆ ನೀಡಿದ್ದರು. ಜೊತೆಗೆ ಮುನಿರತ್ನ ಗೆದ್ದರೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು ಬಿಜೆಪಿ ಗೆಲುವಿಗೆ ಕಾರಣವಾಯ್ತು. ಇನ್ನೂ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಬಿಜೆಪಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುವ ಕಾರಣವೂ ಬಿಜೆಪಿ ಗೆಲುವಿಗೆ ಕಾರಣವಾಗಿರಬಹುದು. ಇತ್ತ ಕನಕಪುರ ಬಂಡೆ ಬ್ರದರ್ಸ್ ಹೆಣದಿದ್ದ ಕಾರ್ಯತಂತ್ರ ಕೈಕೊಡಲಿಲ್ಲ. ಇದೆಲ್ಲದರ ನಡುವೆ ಮುನಿರತ್ನಗಿರೋ ಹೆಸರು ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾರಣವಾಯ್ತು.
ಶಿರಾದಲ್ಲಿ ಕಮಲಾ ಇತಿಹಾಸ ಬರೆದಿದೆ. ಗೆಲುವಿನ ಕೇಕೆ ಹಾಕಿದ್ದಾರೆ. ಶಿರಾ ಕ್ಷೇತ್ರದಿಂದ ಟಿಬಿ ಜಯಚಂದ್ರ ಗೆಲುವಿನ ಭರವಸೆ ಹೊಂದಿದ್ರು. ಆದರೆ ದಳಪತಿಗಳ ಕೋಟೆಯಲ್ಲಿ ಕಲಮ ಅರಳಿದೆ. ಜೆಡಿಎಸ್ ಬದ್ರಕೋಟೆಯನ್ನು ಒಡೆದು ಬಿಜೆಪಿ ಮೊದಲ ಬಾರಿ ಜನ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 74,522 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ನ ಟಿಬಿ ಜಯಚಂದ್ರ 61573 ಮತಗಳನ್ನು ಪಡೆದಿದ್ದಾರೆ.

