ಗ್ರಾಮಸ್ಥರಲ್ಲಿ ಕೊರೊನಾ ಭೀತಿ : ತಾಯಿ ಶವದೊಂದಿಗೆ ಹಸಿವಿನಿಂದ 2 ದಿನ ಕಳೆದ ಪುಟ್ಟ ಕಂದಮ್ಮ!

ಮನೆಯೊಳಗೆ ಎರಡು ದಿನಗಳ ಕಾಲ ಸತ್ತುಹೋದ ತಾಯಿಯ ದೇಹದ ಪಕ್ಕದಲ್ಲಿ ಜೀವಂತವಾಗಿರುವ ಮಗು ಪತ್ತೆಯಾಗಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಹೊರಹೊಮ್ಮಿರುವ ಅಸಂಖ್ಯಾತ ಹೇಳಲಾಗದ ದುರಂತಗಳಲ್ಲಿ ಇದು ಒಂದಾಗಿದೆ.

ಅನುಮಾನಾಸ್ಪದವಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಎರಡು ದಿನಗಳವರೆಗೂ 18 ತಿಂಗಳ ಮಗು ಆ ಸಮಯದಲ್ಲಿ ಆಹಾರ, ನೀರಿಲ್ಲದೆ ತಾಯಿ ಶವದೊಂದಿಗೆ ಇರುವುದು ಕಂಡು ಬಂದಿದೆ. ಕೊರೊನಾಗೆ ಹೆದರಿ ಆ ಮನೆಯ ಕಡೆಗೆ ಸ್ಥಳೀಯರು ಹೋಗಲು ಪ್ರಯತ್ನಿಸಿರಲಿಲ್ಲ. ದರ್ವಾಸನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರ ಪೊಲೀಸರು ಮಹಿಳೆಯ ಶವ ಮತ್ತು ಆಕೆಯ ಪಕ್ಕದಲ್ಲಿರುವ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆ ಶನಿವಾರ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ.

ನೆರೆಹೊರೆಯವರು ಕೊರೊನಾ ಆತಂಕದಿಂದ ಮಗುವನ್ನು ಪಡೆಯಲು ನಿರಾಕರಿಸಿದಾಗ ಪೊಲೀಸ್ ಕಾನ್‌ಸ್ಟೆಬಲ್‌ ಸುಶೀಲಾ ಗಭಲೆ ಮತ್ತು ರೇಖಾ ವೇಜ್ ಅವರು ಮಗುವಿಗೆ ಆಹಾರ ನೀಡಿದ್ದಾರೆ.

“ನನಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಎಂಟು, ಇನ್ನೊಬ್ಬ ಆರು ವರ್ಷ. ಮಗು ನನ್ನ ಸ್ವಂತ ಮಗುವಿನಂತೆ ಭಾಸವಾಯಿತು. ಮಗು ತುಂಬಾ ಹಸಿದಿದ್ದರಿಂದ ಬೇಗನೆ ಹಾಲು ಕುಡಿದಿದೆ” ಎಂದು ಸುಶೀಲಾ ಗಭಲೆ ಹೇಳಿದರು.

ಜ್ವರವನ್ನು ಹೊರತುಪಡಿಸಿ ಮಗು ಅದ್ಭುತವಾಗಿ ಚೆನ್ನಾಗಿದೆ.

“ನಾವು ವೈದ್ಯರಿಗೆ ತೋರಿಸಿದಾಗ ಮಗುವಿಗೆ ಸ್ವಲ್ಪ ಜ್ವರ ಬಂತು. ಮಗುವಿಗೆ ಚೆನ್ನಾಗಿ ಆಹಾರವನ್ನು ಕೊಡುವಂತೆ ಅವರು ಹೇಳಿದರು. ಮಗುವಿಗೆ ಬಿಸ್ಕತ್ ಅನ್ನು ನೀರಿನಲ್ಲಿ ಹಾಕಿ ಆಹಾರ ಮಾಡಿ ತಿನಿಸಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕೊರೋನಾ ಪರೀಕ್ಷೆಗೆ ಕರೆದೊಯ್ಯಿದ್ದೇವೆ” ಎಂದು ಹೇಳಿದರು.

ಮಗುವಿನ ಕೋವಿಡ್ ಪರೀಕ್ಷೆಯು ನಕಾರಾತ್ಮಕವಾಗಿದೆ ಮತ್ತು ಮಗುವನ್ನು ಸರ್ಕಾರಿ ತಂಡಕ್ಕೆ ವರ್ಗಾಯಿಸಲಾಯಿತು.

ಅವನ ತಾಯಿಯ ಶವಪರೀಕ್ಷೆಯಲ್ಲಿ ಅವಳು ಹೇಗೆ ಸತ್ತಳು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಜೊತೆಗೆ ಆಕೆಗೆ ಕೋವಿಡ್ ಇದಿಯೇ ಎಂಬುದು ತಿಳಿದಿಲ್ಲ.

“ಮಹಿಳೆಯ ಪತಿ ಕೆಲಸಕ್ಕಾಗಿ ಉತ್ತರ ಪ್ರದೇಶಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಅವನು ಹಿಂತಿರುಗಲು ನಾವು ಕಾಯುತ್ತಿದ್ದೇವೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ (ಅಪರಾಧ) ಪ್ರಕಾಶ್ ಜಾಧವ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಗುರುವಾರ 24 ಗಂಟೆಗಳಲ್ಲಿ 66,159 ಕೋವಿಡ್ ಪ್ರಕರಣಗಳು ಮತ್ತು 771 ಸಾವುಗಳು ವರದಿಯಾಗಿವೆ. ಪಿಂಪ್ರಿ ಚಿಂಚ್‌ವಾಡ್ ಒಂದು ದಿನದಲ್ಲಿ 2,400 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights