ಕೊರೊನಾ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪ : ಸಂಕೇಶ್ವರ್ ವಿರುದ್ಧ ದೂರು ದಾಖಲು!

ಸಾರ್ವಜನಿಕರಿಗೆ ಕೊರೊನಾ ಮನೆ ಮದ್ದಾಗಿ ನಿಂಬೆ ಹಣ್ಣು ಉಪಯೋಗಿಸುವಂತೆ ಸುಳ್ಳು ಮಾಹಿತಿ ನೀಡಿದ್ದ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ವಿರುದ್ಧ ದೂರು ದಾಖಲಿಸಲಾಗಿದೆ.

ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ಸಂಕೇಶ್ವರ್, ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದ್ದರು. ಇವರ ಮಾತನ್ನು ಕೇಳಿದ ರಾಯಚೂರಿನ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ ನಿಂಬೆಹಣ್ಣಿನ ರಸದ ಪ್ರಯೋಗ ಮಾಡಿ ಜೀವಬಿಟ್ಟಿದ್ದರು.

ಇದರಿಂದಾಗಿ ವಿಜಯ್ ಸಂಕೇಶ್ವರ್ ವಿರುದ್ಧ ಬೆಳಗಾವಿಯ ಆರ್.ಟಿ.ಐ ಕಾರ್ಯಕರ್ತ ಮತ್ತು ವಕೀಲ ಭೀಮನಗೌಡ ಜಿ ಪರಗೋಡ ದೂರು ನೀಡಿದ್ದಾರೆ.

ಸಂಕೇಶ್ವರ್ ಹೇಳಿಕೆ ರಾಜ್ಯದ ಪ್ರಮುಖ ಪತ್ರಿಕೆಗಳಾದ ವಿಜಯವಾಣಿ, ವಿಜಯ ಕರ್ನಾಟಕ ಪ್ರಜಾವಾಣಿ ಹಾಗೂ ಇತರ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು ಜನರನ್ನು ದಾರಿ ತಪ್ಪಸಿದೆ. ಇದರ ಜೊತೆಗೆ ನಾಡಿನ ಹಲವಾರು ತಜ್ಞರು, ವೈದ್ಯರು, ವಿಜಯ ಸಂಕೇಶ್ವರವರ ಹೇಳಿಕೆಯ ಬಗ್ಗೆ ತೀವ್ರವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಅಲ್ಲದೇ, ವಿಜಯ ಸಂಕೇಶ್ವರರವರ ಸಲಹೆಯನ್ನು ಪಾಲಿಸಿ ಮರಣ ಹೊಂದಿದ ಮೃತ ಶಿಕ್ಷಕ ಬಸವರಾಜ ಇವರಿಗೆ ರೂ. 50,00,000/- ರೂ.ಗಳ ಪರಿಹಾರಧನ ನೀಡಬೇಕು ಮತ್ತು ಈ ಘಟನೆಯನ್ನು ಕೊಲೆಗೆ ಪ್ರಚೋದನೆ ಎಂದು ಪರಿಗಣಿಸಿ ಮಾನ್ಯ ಮಾಜಿ ಸಂಸದರ ಮೇಲೆ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

 

Spread the love

Leave a Reply

Your email address will not be published. Required fields are marked *