ಒಂಟಿ ಕಾಲಿನಲ್ಲೇ ಫುಟ್‌‌ಬಾಲ್‌ ಆಡುವ ಬಾಲಕ; ವಿಡಿಯೋ ನೋಡಿ ನೆಟ್ಟಿಗರು ಫಿದಾ!

ಅಂಗವೈಕಲ್ಯ ಹೊಂದಿರುವವರನ್ನು ವಿಕಲಚೇತನ ಎನ್ನಬಾರದು ವಿಷೇಶಚೇತನ ಎಂದು ಕರೆಯಬೇಕು ಎಂಬ ಮಾತನ್ನು ಮಣಿಪುರದ ಬಾಲಕನೊಬ್ಬ ಸಾಬೀತು ಪಡಿಸಿದ್ದಾರೆ. ವೈಕಲ್ಯ ಎಂಬುದು ಮನಸ್ಸಿಗೇ ಹೊರತು ದೇಹಕ್ಕಲ್ಲ ಎಂಬುದಕ್ಕೆ ಆತ ಸಾಕ್ಷಿಯಾಗಿದ್ದಾನೆ. ಹುಟ್ಟುವಾಗಲೇ ಒಂದು ಕಾಲು ಕಳದುಕೊಂಡು ಹುಟ್ಟಿರುವ ಆ ಬಾಲಕ ಇತರ ಬಾಲಕರಂತೆಯೇ ಫುಟ್‌ಬಾಲ್‌ ಆಟದಲ್ಲಿ ಪಳಗಿದ್ದು, ಒಂದೇ ಕಾಲಿನಲ್ಲಿ ಫುಟ್‌ಬಾಲ್‌ ಆಡುತ್ತಿದ್ಧಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಮಣಿಪುರದ ಕುನಾಲ್ ಶ್ರೇಷ್ಠ ಎಂಬ ಬಾಲಕ ತನ್ನ ಒಂದು ಕಾಲನ್ನು ಹುಟ್ಟುವಾಗಲೇ ಕಳೆದುಕೊಂಡಿದ್ದ. ತನಗೆ ಕಾಲಿಲ್ಲ ಅಥವಾ ದೈಹಿಕ ಅಂಗವೈಕಲ್ಯತೆ ಅವನ ನೆಚ್ಚಿನ ಆಟವಾಡಲು ಅಡ್ಡಿಯಾಗಿಲ್ಲ. ಹೀಗಾಗಿ ಇತರ ಮಕ್ಕಳಂತೆ ಆತ ಚೆನ್ನಾಗಿಯೇ ಫುಟ್‍ಬಾಲ್ ಆಡುತ್ತಿದ್ದಾನೆ.

ಊರುಗೋಲು ಹಿಡಿದುಕೊಂಡೇ ಸೊಗಸಾಗಿ ಫುಟ್‍ಬಾಲ್ ಆಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫುಟ್‌ಬಾಲ್‌ಗೆ ಪ್ರಮುಖವಾಗಿರು ಬೇಕಾಗಿರುವುದೇ ಕಾಲು, ಆದರೆ ಒಂದೇ ಕಾಲಿನಲ್ಲಿ ಫುಟ್‌ಬಾಲ್‌ ಆಡುವ ಬಾಲಕನ ಸಾಧನೆಗೆ ಎಲ್ಲರೂ ಮನಸೋತಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆ ಶಾಲೆ ಇಲ್ಲದಿರುವುದರಿಂದ ತನ್ನ ತಾಯಿಗೆ ಪಾನಿಪೂರಿ ತಯಾರಿಸಲು ಬಾಲಕ ಕುನಾಲ್‌ ಸಹಾಯ ಮಾಡುತ್ತಾನೆ. ಬಾಲಕನ ತಾಯಿ ಇದನ್ನು ಸೇಲ್‌ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕ, ಫುಟ್‍ಬಾಲ್ ಆಡುವುದೆಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾನೆ.

ಆರಂಭದಲ್ಲಿ ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತಿತ್ತು. ಆಗ ತುಂಬಾ ಹೆದರುತ್ತಿದ್ದೆ. ನಂತರ ಆತ್ಮವಿಶ್ವಾಸ ತಂದುಕೊಂಡೆ. ನನ್ನ ಸ್ನೇಹಿತರು ನನಗೆ ತುಂಬಾ ಬೆಂಬಲ ನೀಡಿದರು. ಶೀಘ್ರವೇ ಗೋಲ್ ಹೊಡೆಯುವ ನಂಬಿಕೆ ನನಗಿದೆ ಎಂದು ಕುನಾಲ್ ತಿಳಿಸಿದ್ದಾನೆ.


ಇದನ್ನೂ ಓದಿ: “ನಾನು ನಿವೃತ್ತಿ ಹೊಂದಿದ್ದೇನೆ” ಎಂದ ಪಿವಿ ಸಿಂಧು: ಅಭಿಮಾನಿಗಳಿಗೆ ಕೊನೆಯಲ್ಲಿ ಟ್ವಿಸ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights