ದೇಶ ಹಾಗೂ ದೇಶದ ಸಂವಿಧಾನ ಅಪಾಯದಲ್ಲಿದೆ- ಮಾಜಿ ಸಿಎಂ ಸಿದ್ದರಾಮಯ್ಯ
ದೇಶ ಇಂದು ಅಪಾಯದಲ್ಲಿ, ದೇಶದ ಸಂವಿಧಾನವೂ ಇಂದು ಅಪಾಯದಲ್ಲಿದೆ. ದೇಶವನ್ನ ಪ್ರೀತಿಸುವ ಪ್ರತಿಯೊಬ್ಬರು ಇವತ್ತು ದೇಶ ಹಾಗೂ ಸಂವಿಧಾನ ಉಳಿವಿಗೆ ಮುಂದಾಗಬೇಕು, ಅದಕ್ಕೆ ಜಾತಿ-ಧರ್ಮ ಅಡ್ಡ ಬರಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಜಾಮೀಯ ಮಸೀದಿಯಲ್ಲಿ ನಡೆದ ಹಜ್ರತ್ ಸೈಯದ್ ಸಲಾಹುದ್ದೀನ್ ಷಾ ಖಾದ್ರಿ ಸಂಘಟನೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದರು ಅವರು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನವನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಇತ್ತೀಚಿಗೆ ಸಿಎಎ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ.
ಎನ್.ಆರ್.ಸಿ ಹಾಗೂ ಎಂ.ಪಿ.ಆರ್ ಈ ಮೂರು ಕಾಯ್ದೆಗಳು ಬಿಡಿಬಿಡಿಯಾದಂತ ಕಾಯ್ದೆಗಳಲ್ಲ. ಒಂದಕ್ಕೊಂದು ಸಂಬಂಧ ಇರುವಂತಹಾ ಕಾಯ್ದೆಗಳು. ಇವರ ಉದ್ದೇಶ ಒಂದು ಧರ್ಮದ ಜನರನ್ನ ಗುರಿಯಾಗಿಟ್ಟುಕೊಂಡು, ಅವರನ್ನ ಗುರಿಯಾಗಿಟ್ಟುಕೊಂಡು ಈ ಕಾನೂನನ್ನ ಜಾರಿ ಮಾಡುವ ಮೂಲಕ ಈ ದೇಶದ ಮೂಲ ನಿವಾಸಿಗಳಿಗೂ ಕೂಡ ತೊಂದರೆಯಾಗ್ತಿದೆ ಎಂದಿದ್ದಾರೆ.

