ಹರಿಯಾಣ: ಎಸ್‌ಐ ಪರೀಕ್ಷೆಯಲ್ಲಿ ಬಿಜೆಪಿ ರಾಜಕಾರಣಿಗಳ ಬಗ್ಗೆ ಪ್ರಶ್ನೆ; ಪರೀಕ್ಷೆಯಲ್ಲಿ ದಂಗಾದ ಅಭ್ಯರ್ಥಿಗಳು!

ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಬಿಜೆಪಿ ರಾಜಕಾರಣಿಗಳು ಹಾಗೂ ಸಿನಿಮಾ ನಟ-ನಟಿಯರ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದು ಕಂಡುಬಂದಿದೆ. ಇದರಿಂದ ಪರೀಕ್ಷಾ ಅಭ್ಯರ್ಥಿಗಳು ಅಚ್ಚರಿ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಸರ್ಕಾರ ಇತ್ತೀಚೆಗೆ 463 ಎಸ್‌ಐ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆ ನಡೆಸಿತ್ತು. ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕಾನೂನು ಮತ್ತು ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳಿಗಿಂತಲೂ ಹೆಚ್ಚಾಗಿ ಬಿಜೆಪಿ ರಾಜಕಾರಣಿಗಳು ಮತ್ತು ಸಿನೆಮಾ ತಾರೆಯರ ಕುರಿತ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಶ್ನೆ ಪತ್ರಿಕೆಯಲ್ಲಿ

1. ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರ ವಿಶಿಷ್ಟತೆಯೇನು?

2. ಹರ್ಯಾಣದ ಜತೆ ನಂಟು ಹೊಂದಿರುವ ಉತ್ತರಾಖಂಡ ಬಿಜೆಪಿ ಸರಕಾರದ ಸಚಿವರನ್ನು ಹೆಸರಿಸಿ.

3. ಇತ್ತೀಚೆಗೆ ತಮ್ಮ ತಂದೆಯನ್ನು ಕಳೆದುಕೊಂಡ ಹರ್ಯಾಣ ಬಿಜೆಪಿ ಸಂಸದರ ಹೆಸರು ತಿಳಿಸಿ.

3. ಬರೋಡ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಯಾರು ಸ್ಪರ್ಧಿಸಿದ್ದರು.

4. ಬೇಬಿ ರಾಣಿ ಮೌರ್ಯ ಯಾರು?

5. ಹರ್ಯಾಣ ರಾಜ್ಯ ಬಿಜೆಪಿ ಅಧ್ಯಕ್ಷರ್ಯಾರು?

6. ಹರ್ಯಾಣಾದ ವಿತ್ತ ಹಾಗೂ ಪ್ರವಾಸೋದ್ಯಮ ಸಚಿವರು ಯಾರು?

7. ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಯಾರು?

8. ಹರ್ಯಾಣಾದ ಖ್ಯಾತ ಕ್ರಿಕೆಟಿಗರೊಬ್ಬರು ಸೊಸೆ ಯಾರು?

9. ಬಾಲಿವುಡ್ ಚಿತ್ರ ಎನ್‍ಎಚ್-10 ಇದರ ನಾಯಕನಟಿ ಯಾರು?

ಈ ರೀತಿ ಹಲವು ಪ್ರಶ್ನೆಗಳನ್ನು ಎಸ್‌ಐ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಕಾನೂನಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ ಬಂದಿದ್ದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೋಡಿ ದಂಗುಬಡಿತಂದಾಗಿತ್ತು.

“ಕೆಲ ಪ್ರಶ್ನೆಗಳು ಅಪ್ರಸ್ತುತ ಎಂಬುದನ್ನು ಒಪ್ಪುತ್ತೇನೆ. ಪ್ರಶ್ನೆಪತ್ರಿಕೆ ತಯಾರಿಸಿದ ಏಜನ್ಸಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಅವರ ಉತ್ತರ ದೊರೆತ ನಂತರ ಅದನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ. ಹರ್ಯಾಣ ಸರಕಾರ ಕೂಡ ಈ ಪರೀಕ್ಷೆಯಿಂದ ಸಮಾಧಾನಗೊಂಡಿಲ್ಲ. ಭವಿಷ್ಯದಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ”ಎಂದು ಹರ್ಯಾಣ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಭೋಪಾಲ್ ಸಿಂಗ್ ಖಾದ್ರಿ ಹೇಳಿದ್ದಾರೆ.

ಆದರೆ, ಮರುಪರೀಕ್ಷೆ ನಡೆಸುವ ಸಾಧ್ಯತೆಯಿಲ್ಲ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮರ್ಯಾದಗೇಡು ಹತ್ಯೆ: ಯುವಕನ ಸಜೀವ ದಹನ; ರಾಜಕೀಯಕ್ಕೆ ಬಳಕೆಯಾಗುತ್ತಿದೆ ಅಮಾನುಷ ಘಟನೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights