ಡ್ರಗ್ ಕೇಸ್ ಅಘಾತದಿಂದ ಹೊರಬಾರದೆ ನಿದ್ದೆಯಲ್ಲೂ ಬೆಚ್ಚಿಬೀಳುವ ಸಂಜನಾ!

ಡ್ರಗ್ ಕೇಸ್ ನಲ್ಲಿ ಗಣೇಶ್.ದೀಪಾವಳಿ, ದಸರ ಎಲ್ಲಾ ಹಬ್ಬವನ್ನೂ ಪರಪ್ಪನ ಅಗ್ರಹಾರದಲ್ಲಿ ಕಳೆದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಡ್ರಗ್ ಕೇಸ್ ಅಘಾತದಿಂದ ಹೊರಬಾರದೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರಂತೆ.

ಹೌದು… ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿದ ಸಂಜನಾ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  87 ದಿನಗಳ ಬಳಿಕ ಸಂಜನಾ ಜೈಲಿನಿಂದ ಹೊರಬಂದಿದ್ರು. ಜೈಲಿನಲ್ಲಿ ಸೊಳ್ಳೆ ಕಾಟ ಆಕೆಯ ಹೈಫೈ ಲೈಫ್ ನ್ನ ಕರಾಬು ಮಾಡಿತ್ತು. ಜಾಮೀನಿಗಾಗಿ ವಿಲವಿಲ ಒದ್ದಾಡಿದ್ದ ಸಂಜನಾ ಅನಾರೋಗ್ಯದ ಕಾರಣ ಒಡ್ಡಿ ಜಾಮೀನು ಪಡೆದುಕೊಂಡಿದ್ದಾರೆ.

ಆದರೆ ಸಂಜನಾ ನಿದ್ರಾಹೀಳಾನಾಗಿದ್ದಾಳಂತೆ. ಜೈಲಿನಲ್ಲಿ ಕಳೆದ ಕ್ಷಣಗಳನ್ನು ಮರೆಯಲು ಸುಲಭವಲ್ಲ. ಇದನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ನನಗಾದ ಅಘಾತ ಜನರಿಗೆ ಹೇಳುವುದು ಸಾಧ್ಯವಿಲ್ಲ. ದೇವರಿದ್ದಾನೆ ಎಲ್ಲಾ ಅವನಇಚ್ಚೆಯಂತೆ ನಡೆಯಲಿ ಎಂದಿದ್ದಾಳೆ. ಯಾರನ್ನ ನಂಬಲಿ ಯಾರನ್ನು ಬಿಡಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ನನಗೆ ನಮ್ಮೋರಿದಂಲೇ ತೊಂದರೆಯಾಗಿದೆ. ಹೀಗಾಗಿ ಮನೆಗೂ ಯಾರನ್ನೂ ಸೇರಿಸುತ್ತಿಲ್ಲ  ಎಂದು ಸಂಜನಾ ಹೇಳಿಕೊಂಡಿದ್ದಾಳೆ.

ಇನ್ನೂ ಜೈಲು ವಾಸದ ಬಳಿಕ ಸಂಜನಾ ಲೈಫ್ ಸ್ಟೈಲ್ ಬದಲಾಗಿದೆ. ಅನಾರೋಗ್ಯದಿಂದಾಗಿ ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ಇನ್ನೂ ತಾವು ತೀರಾ ಚಿಕ್ಕ ಸಿನಿಮಾ ನಾನು ಮಾಡಲ್ಲ. ಇದರ ಬದಲಗೆ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಮಾಡುತ್ತೇನೆ ಎಂದಿದ್ದಾರೆ.

ಜೊತೆಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ ಸಂಜನಾ ತಮ್ಮದು ಎಂಗೇಜ್ ಮೆಂಟ್ ಆಗಿದೆ. ಆದರೆ ಮದುಗೆ ಖರ್ಚು ಮಾಡೋ ತಾಕತ್ತಿಲ್ಲ. ಕೋರ್ಟ್ ಕಚೇರಿ ಯಿಂದ ದುಡ್ಡು ಖರ್ಚಾಗಿದೆ. ಹೀಗಾಗಿ ಸದ್ಯ ಮದುವೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ನಾನು ಕೆಟ್ಟವಳಲ್ಲ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದೇನೆ. ಆದರೆ ಸಹಾಯ ಮಾಡುವ ಲಕ್ಷಾಂತರ ಜನರು ಒಂದೋಂದು ಕಲ್ಲು ಹೊಡೆದು ಹೋಗುತ್ತಾರೆ ಎಂದು ಇನ್ಸ್ಟಾಗ್ರಾಮ್ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights