ಹೆಸರು ಬದಲಿಸಿ ಮದುವೆ : ಮತಾಂತರಕ್ಕಾಗಿ ಪತ್ನಿಗೆ ಒತ್ತಾಯ – ಪತಿ ಅರೆಸ್ಟ್!

ಹೆಸರು ಬದಲಿಸಿಕೊಂಡು ಮದುವೆಯಾದ ವ್ಯಕ್ತಿ ಪತ್ನಿಗೆ ಮತಾಂತರಗೊಳ್ಳಲು ಬಲವಂತಗೊಳಿಸಿ ಬಂಧನವಾದ ಘಟನೆ ಉತ್ತರ ಪ್ರದೇಶದ ಗೋರಕಪುರದಲ್ಲಿ ನಡೆದಿದೆ.

ಗೋರಕಪುರ, ಉತ್ತರ ಪ್ರದೇಶ: ಮಹಿಳೆಯೊಬ್ಬಳನ್ನು ತನ್ನ ಗುರುತನ್ನು ಮರೆಮಾಚುವ ಮೂಲಕ ಮದುವೆಯಾಗಿ ನಂತರ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಲು ಯತ್ನಿಸಿದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿ ಮೈನುದ್ದೀನ್ ಕಳೆದ ವರ್ಷ ಮಹಿಳೆಯನ್ನು ಭೇಟಿಯಾಗಿ ತನ್ನನ್ನು ಮುನ್ನಾ ಯಾದವ್ ಎಂದು ಪರಿಚಯಿಸಿಕೊಂಡಿದ್ದಾನೆ. ಮೈನುದ್ದೀನ್ ಮಹಿಳೆಯೊಂದಿಗೆ ಹತ್ತಿರವಾಗಿ ಸಂತ ಕಬೀರ್ ನಗರದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾನೆ. ಕೆಲ ದಿನಗಳ ಬಳಿಕ ಆರೋಪಿ ತನ್ನ ನಿಜವಾದ ಹೆಸರು ಮತ್ತು ಧರ್ಮವನ್ನು ಬಹಿರಂಗಪಡಿಸಿದ್ದಾನೆ. ಮಾತ್ರವಲ್ಲದೇ ಮತಾಂತರಗೊಳ್ಳುವಂತೆ ಮಹಿಳೆಗೆ ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಪತ್ನಿ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ಅವಳ ಮೇಲೆ ಹಲ್ಲೆ ಮಾಡಿದ್ದಾನೆ.

ಶನಿವಾರ ಮೈನುದ್ದೀನ್ ಮತ್ತೆ ಮದುವೆಯಾಗಲು ಯೋಜಿಸುತ್ತಿರುವುದನ್ನು ಮಹಿಳೆ ತಿಳಿದುಕೊಂಡು ಎಫ್ಐಆರ್ ನೋಂದಾಯಿಸಿದ್ದಾರೆ. ಸೋಮವಾರ ಮೈನುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.

“ಐಪಿಸಿ (ಭಾರತೀಯ ದಂಡ ಸಂಹಿತೆ) ಯ ಸೆಕ್ಷನ್ 323, 504, 506, 419 ಮತ್ತು 120 ಬಿ ಸೆಕ್ಷನ್ ಮತ್ತು ಯುಪಿ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ, 2020 ರ ನಿಬಂಧನೆಗಳ ಅಡಿಯಲ್ಲಿ ಮೈನುದ್ದೀನ್ ಅಲಿಯಾಸ್ ಮುನ್ನಾ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ “ಎಂದು ಪೊಲೀಸ್ ಅಧಿಕಾರಿ ದೇವೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights