‘ಸಿಡಿ ಕೇಸ್ ಎಸ್ಐಟಿ ತನಿಖೆಗೆ ನೀಡಿದ್ದು ತಿಪ್ಪೆ ಸಾರಿಸೋ ಕೆಲಸ’- ಹೆಚ್ಡಿ ಕುಮಾರಸ್ವಾಮಿ

ರಮೇಶ್ ಸಿಡಿ ವಿಚಾರ ಎಸ್ಐಟಿ ತನಿಖೆಗೆ ನೀಡಿದ್ದು ತಿಪ್ಪೆ ಸಾರಿಸೋ ಕೆಲಸ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ. ” ಎಸ್ಐಟಿ ತನಿಖೆಯಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ. ಇಲ್ಲಿವರೆಗೂ ರಾಜಕಾರಣದಲ್ಲಿ ಹೆಚ್ಚಾಗಿ ಎಸ್ಐಟಿ ತನಿಖೆ ಆಗಿವೆ. ಆದರೆ ಯಾವ ರಾಜಕಾರಣಿಗಳು ಕೂಡ ಜೈಲಿಗೆ ಹೋಗಿಲ್ಲ. ಹೋಗಿದ್ದರೂ ಅದ್ಯಾರೋ ಸಣ್ಣ ಮಟ್ಟದ ಅಮಾಯಕ ರಾಜಕಾರಣಿಗಳು ಅಷ್ಟೇ” ಎಂದಿದ್ದಾರೆ .

ಹೀಗಾಗಿ ಎಸ್ಐಟಿ ತನಿಖೆ ಅಂದ್ರೆ ತಿಪ್ಪೆ ಸಾರಿಸೋ ಕೆಲ್ಸ. ಎಸ್ಐಟಿ ಮಾತ್ರವಲ್ಲ ಪೊಲೀಸ್ ತನಿಖೆ , ಆಯೋಗ ತನಿಖೆ ಇರಲಿ ಯಾವುದೇ ತನಿಖೆಯಲ್ಲಿ ಯಾರೂ ಕೂಡ ತಪ್ಪಿಕಸ್ಥರು ಜೈಲಿಗೆ ಹೋಗಿಲ್ಲ. ಅಮಾಯಕರು ಹೋಗಿರಬಹುದು. ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಇಂಥ ವಿಷಯಗಳನ್ನು ಜನರಿಗೆ ತೋರಿಸಿ ಜನತೆಗೆ ಯಾವ ಸಂದೇಶ ಕೊಡುತ್ತಿರೋ ರಾಜಕಾರಣಗಳು ಎಂದು ಕಿಡಿ ಕಾರಿದ್ದಾರೆ.

ಎಸ್ ಐಟಿ ವರದಿ ಪ್ರಯೋಜನವಿಲ್ಲವೇ?

ಇನ್ನೂ ಸಿಡಿ ಕೇಸ್ ಎಸ್ ಐಟಿ ವರದಿ ಮೇಲೆ ನಿಂತಿದೆ. ಇದರ ತನಿಖೆಗೆ ಯಾವುದೇ ಗಡುವು ಇಲ್ಲ. ಆರಂಭದಲ್ಲಿ ಪ್ರಾಥಮಿಕ ವರದಿ ಸಲ್ಲಿಸುತ್ತದೆ. ತನಿಖೆ ಶೀಘ್ರವಾದರೂ ಆಗಬಹುದು ವಿಳಂಬವಾದರೂ ಆಗಬಹುದು. ಅತ್ಯಂತ ವೇಗವಾಗಿ ತನಿಖೆ ಮಾಡಿದ್ದು ಇದೆ. ವಿಳಂಬವಾಗಿ ತನಿಖೆ ಮಾಡಿದ್ದು ಇದೆ. ಹೀಗಾಗಿ ರಮೇಶ್ ಸಿಡಿ ತನಿಖೆ ಯಾವ ರೀತಿಯಾಗುತ್ತೋ? ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights