ಅದ್ದೂರಿಯಾಗಿ ತೆರೆ ಕಂಡ ರಾಬರ್ಟ್ : ರಾಜ್ಯದಲ್ಲಿ ಡಿಬಾಸ್ ನದ್ದೇ ಅಬ್ಬರ..!

ಇಂದು ಬೆಳಿಗ್ಗೆ 6 ಗಂಟೆಯಿಂದ ರಾಬರ್ಟ್ ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದ್ದು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಥಿಯೇಟರ್ ಮುಂದೆ ಜಮಾಯಿಸಿ ಸಂಭ್ರಮಿಸುತ್ತಿದ್ದಾರೆ.

ಹೌದು…  ಕನ್ನಡ ತೆಲಗು ಭಾಷೆಯಲ್ಲಿ ಸಿನಿಮಾ ತೆರೆ ಕಂಡ ರಾಬರ್ಟ್ ಮಹಾ ಶಿವರಾತ್ರಿಗೆ ಗಿಫ್ಟ್ ಆಗಿ ರಿಲೀಸ್ ಆಗಿದೆ. ಬೆಳಿಗ್ಗೆ 6 ಗಂಟೆಯಿಂದಲೇ ರಾಬರ್ಟ್ ಸಿನಿಮಾ ಅಬ್ಬರ ಜೋರಾಗಿದೆ. ದಚ್ಚು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬೆಂಗಳೂರು ಮೈಸೂರು, ಬಳ್ಳಾರಿ ದಾವಣಗೆರೆಯಲ್ಲಿ ರಾಬರ್ಟ್ ಅಬ್ಬರ ಜೋರಾಗಿದೆ. ರಾಜ್ಯದ 500ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ಆರಂಭವಾಗುತ್ತಿದ್ದಂತೆ ಹೂವಿನ ಹಾರ ಹಾಕಿ ಜನ ಸಂಭ್ರಮಿಸಿದ್ದಾರೆ.

ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ನಲ್ಲಿ ಸಿನಿಮಾ ಫಸ್ಟ್ ಶೋ ರಿಲೀಸ್ ಆಗಿದ್ದು, ಕೆಲವೆಡೆ ಟಿಕೇಟ್ ಸೋಲ್ಡ್ ಔಟ್ ಆಗಿದೆ. ದರ್ಶನ್ ಬೃಹತ್ ಕಟ್ ಔಟ್ ಗೆ ಹಾಲಿನ ಅಭಿಷೇಕ, ಬಲೂನ್ ಹಾರ, ಅನ್ನದಾನ. ಸ್ವೀಟ್ ಹಂಚಿ ಸ್ಟೆಪ್ ಹಾಕಿ ಎಂಜಾಯ್ ಮಾಡುತ್ತಿದ್ದಾರೆ.

ಎರಡು ವರ್ಷಗಳ ನಂತರ ಚಾಲೆಂಜ್ ಸ್ಟಾರ್ ದರ್ಶನ್ ಸಿನಿಮಾ ತೆರೆಕಂಡಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights