ಬಿಹಾರ ವಿಧಾನಸಭೆಗೆ ಘೆರಾವ್: RJD ನಾಯಕ ತೇಜಶ್ವಿ ಯಾದವ್, ತೇಜ್ ಪ್ರತಾಪ್ ವಿರುದ್ಧ FIR

ಮಂಗಳವಾರ ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಪಕ್ಷದ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ರಾಷ್ಟ್ರೀಯ ಜನತಾದಳ (RJD) ಮುಖಂಡರಾದ ತೇಜಶ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಹಲವಾರು ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯದ ನಿರುದ್ಯೋಗ, ಹಣದುಬ್ಬರ ಮತ್ತು ಕಾನೂನು ಸುವ್ಯವಸ್ಥೆಯ ಅವ್ಯವಸ್ಥೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟಿಸಲು ತೇಜಶ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರ ನೇತೃತ್ವದಲ್ಲಿ ಆರ್‌ಜೆಡಿ ಕಾರ್ಯಕರ್ತರು ಮಂಗಳವಾರ ಬಿಹಾರ ವಿಧಾನಸಭೆಗೆ ಘೆರಾವ್ ಮಾಡಲು ಮುಂದಾಗಿದ್ದರು.

ವಿಧಾನಸಭೆ ಎಡೆಗೆ ಹೊರಟಿದ್ದ ಆರ್‌ಜೆಡಿ ಕಾರ್ಯಕರ್ತರನ್ನು ಪಾಟ್ನಾದ ದಕ್‌ ಬಂಗ್ಲೋ ಕ್ರಾಸಿಂಗ್‌ ಪೊಲೀಸರು ತಡೆದರು. ಈ ವೇಳೆ, ಆರ್‌ಜೆಡಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಪಿರಂಗಿ ದಾಳಿ, ಲಾಠಿ ಚಾರ್ಜ್‌ ನಡೆಸಿದ್ದಾರೆ.

ಪ್ರತಿಭಟನೆಗೆ ಅನುವತಿ ನೀಡಿರಲಿಲ್ಲ. ಆದರೂ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ತೇಜ್‌ ಪ್ರತಾಪ್‌ ಯಾದವ್‌ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ.

ಎಫ್ ಐಆರ್ ನಲ್ಲಿ ಆರ್ ಜೆಡಿಯ ಶ್ಯಾಮ್ ರಜಕ್, ಮಾಜಿ ಸಚಿವ ಅಬ್ದುಲ್ ಬಾರಿ ಸಿದ್ದಿಕಿ, ಕೇಂದ್ರದ ಮಾಜಿ ಸಚಿವ ಕಾಂತಿ ಸಿಂಗ್ ಸೇರಿದಂತೆ ಹಲವರ ಹೆಸರುಗಳಿವೆ.

Read Also: ಬ್ಯಾಂಕ್‌ಗಳನ್ನು ನಿರ್ವಹಸಲಾಗದೆ ಖಾಸಗೀಕರಣ ಮಾಡುತ್ತಿದ್ದೇವೆ: ನಿರ್ಮಲಾ ಸೀತಾರಾಮನ್‌ ರಾಜೀನಾಮೆಗೆ ಒತ್ತಾಯ!

Spread the love

Leave a Reply

Your email address will not be published. Required fields are marked *