ಕಾಣೆಯಾದ ಮಗಳ ಪತ್ತೆಗಾಗಿ ಲಂಚ ಕೋರಿದ ಪೊಲೀಸ್ : ತಂದೆ ಆತ್ಮಹತ್ಯೆ!

ಉತ್ತರಪ್ರದೇಶದಲ್ಲಿ ಕಾಣೆಯಾದ ಮಗಳನ್ನು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಯೊಬ್ಬರು ಲಂಚ ಕೇಳಿದ್ದರಿಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೌ ಚಂದ್ಪುರ ಗ್ರಾಮದಲ್ಲಿ ಸೋಮವಾರ 45 ವರ್ಷದ ಶಿಶುಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಶುಪಾಲ್ ಅವರ ಮಗಳ ಅಪಹರಣಕ್ಕೆ ಸಂಬಂಧಿಸಿದ ಎಫ್ಐಆರ್ ಏಪ್ರಿಲ್ 9 ರಂದು ಅಯೋನ್ಲಾ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾಗಿತ್ತು. ನಾಪತ್ತೆಯಾದ 22 ವರ್ಷದ ಮಗಳನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಯೊಬ್ಬರು ಒಂದು ಲಕ್ಷ ರೂಪಾಯಿ ಲಂಚ ಕೇಳಿದ ನಂತರ ಅವರು ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಶಿಶುಪಾಲ್ ಅವರ ಕುಟುಂಬ ಸದಸ್ಯರ ಪ್ರಕಾರ, ರಾಮ್‌ನಗರ ಪೊಲೀಸ್ ಔಟ್‌ಪೋಸ್ಟ್ ಉಸ್ತುವಾರಿ ರಾಮ್ ರತನ್ ಸಿಂಗ್ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.

ರಾಮ್ ರತನ್ ಸಿಂಗ್ ಅವರು ಶಿಶುಪಾಲ್ ಅವರ ಸಾವಿನ ಸ್ಥಳವನ್ನು ಕೇಳಿ ತಿಳಿದುಕೊಂಡು ಆ ಸ್ಥಳಕ್ಕೆ ತಲುಪಿ ಆತ್ಮಹತ್ಯೆ ಪತ್ರವನ್ನು ಕಂಡುಕೊಂಡು ಹರಿದು ಹಾಕಿದ್ದಾರೆ. ಇದನ್ನು ನೋಡಿದ ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೀಗಾಗಿ ಸಬ್ ಇನ್ಸ್‌ಪೆಕ್ಟರ್‌ನನ್ನು ಹೊರಠಾಣೆ ಸ್ಥಳದಿಂದ ಸ್ಥಳಾಂತರಿಸಲಾಗಿದ್ದು ಲಂಚ ಕೇಳಿದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights