ಇ-ಬೈಕ್‌ ಟ್ಯಾಕ್ಸಿ: ಕೆಲವೇ ಜನರಿಗೆ ಉಪಯೋಗ; ಲಕ್ಷಾಂತರ ಚಾಲಕರಿಗೆ ಸಂಕಷ್ಟ: NCTU

ರಾಜ್ಯದಲ್ಲಿ ಎಲೆಕ್ಟ್ರಿಕ್‌ ಬೈಕ್ (ಇ-ಬೈಕ್‌) ಟ್ಯಾಕ್ಸಿ ಸೇವೆಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ. ಇ-ಬೈಕ್‌ ಸೇವೆಗೆ ಸಾರಿಗೆ ಇಲಾಖೆ ಅನುಮೋದನೆಯನ್ನೂ ನೀಡಿದೆ. ಆದರೆ, ಇ-ಬೈಕ್‌ಗಳ ಸೇವೆಯಿಂದ ಹಲವಾರು ಚಾಲಕರ ಬದುಕು ದುಸ್ಥರವಾಗಲಿದೆ. ಆಟೋ-ಕ್ಯಾಬ್‌ಗಳನ್ನೇ ನಂಬಿ ಬದುಕುತ್ತಿರುವವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೆ, ಬಿಎಂಟಿಸಿಗೂ ಭಾರೀ ಹೊಡೆತ ಬೀಳಲಿದೆ ಎಂದು ‘ನಮ್ಮ ಚಾಲಕರ ಟ್ರೇಡ್ ಯುನಿಯನ್(NCTU)’ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಇ-ಬೈಕ್ ಟ್ಯಾಕ್ಸಿ ಪ್ರಾರಂಭವಾದರೆ ಚಾಲಕ ವೃತ್ತಿಯನ್ನೇ ನಂಬಿ ಸುಮಾರು ನಲವತ್ತು ವರ್ಷಗಳಿಂದ ದುಡಿಯುತ್ತಿರುವ ಹಿರಿಯ ಆಟೋ ಚಾಲಕರ ಪರಿಸ್ಥಿತಿ ಹೀನಾಯವಾಗುತ್ತದೆ. ಈಗಾಗಲೆ ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಉಳಿದಂತಹ ಜಮಿನುಗಳನ್ನು, ಮನೆಗಳನ್ನು, ಮನೆಯ ಆಭರಣಗಳನ್ನು ಮಾರಿ ಅಥವಾ ಅಡ ಇಟ್ಟು ಸಾಲ ಮಾಡಿ ಕ್ಯಾಬ್‌ ಆಟೋ ಖರೀದಿ ಮಾಡಿ ಜೀವನ ನಡೆಸುತ್ತಿರುವವರ ಪರಿಸ್ಥಿತಿ ಏನಾಗಬಹುದು ಎಂದು ಯುನಿಯನ್ ಪ್ರಶ್ನಿಸಿದೆ.

ಕೆಲವೇ ಜನರ ಹಿತಾಸಕ್ತಿಯ ಇ-ಬೈಕ್‌‌‌‌‌ ಯೋಜನೆಯಿಂದ ಲಕ್ಷಾಂತರ ಚಾಲಕರ ಜೀವನಕ್ಕೆ ಧಕ್ಕೆ: NCTU ಆಕ್ರೋಶ

“ಚಾಲಕರು ಸುಮಾರು ಒಂದೂವರೆ ವರ್ಷಗಳಿಂದ ದುಡಿಮೆಯಿಲ್ಲದೆ EMI, ಇನ್ಶೂರೆನ್ಸ್ ,ಟ್ಯಾಕ್ಸ್‌ ಅನ್ನು ಕಟ್ಟಿದ್ದಾರೆ. ಕೋವಿಡ್ 1ನೇ ಅಲೆಯ ಸಮಯದಲ್ಲಿ ಮಾತ್ರ ಕೇವಲ 3 ತಿಂಗಳ EMI ಅನ್ನು ಮುಂದೂಡಲಾಗಿತ್ತು. ಆದರೆ ಅದರ ಬಡ್ಡಿಯನ್ನು ಸಹ ಕಡಿಮೆ ಮಾಡಿರಲಿಲ್ಲ. ಚಾಲಕರು ಕೊರೊನಾದಿಂದಾಗಿ ಕಂಗೆಟ್ಟು ಸುಮಾರು 2 ವರ್ಷಗಳಿಂದ ಸರಿಯಾದ ದುಡಿಮೆಯಿಲ್ಲದೆ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಇ-ಬೈಕ್‌‌ ಟ್ಯಾಕ್ಸಿಯಿಂದ ಅವರ ಜೀವನ ಮತ್ತಷ್ಟು ಹದಗೆಡುತ್ತದೆ” ಎಂದು ಯುನಿಯನ್ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪೆಗಾಸಸ್‌ನಲ್ಲಿ ಮೋದಿ ಸರ್ಕಾರದ ಪಾತ್ರವೇನು? ಆರ್‌ಟಿಐ ಅರ್ಜಿ ಸಲ್ಲಿಕೆ!

“ಖಾಸಗಿ ಫೈನಾನ್ಸ್‌ನವರು ಚಾಲಕರಿಗೆ ಹಿಂಸೆ ನೀಡುತ್ತಾ ದಬ್ಬಾಳಿಕೆ ಮಾಡಿ EMI ವಸೂಲಿ ಮಾಡುತ್ತಿರುವುದನ್ನು ಅನೇಕ ಬಾರಿ ಸರಕಾರದ ಗಮನಕ್ಕೆ ತಂದಿದ್ದೆವು. ಆದರೂ ಸಹ ಅವರ ವಿರುದ್ಧ ಕ್ರಮ ಜರುಗಿಸದೇ ಇದ್ದುದರಿಂದ ಅನೇಕ ಚಾಲಕರು ಆತ್ಮಹತ್ಯೆಯ ದಾರಿ ಹಿಡಿದು ಅವರ ಕುಟುಂಬ ಸದಸ್ಯರು ಬೀದಿ ಪಾಲಾಗುವಂತಾಗಿದೆ. ಇದಕ್ಕೆಲ್ಲಾ ಈ ಸರ್ಕಾರವೇ ಹೊಣೆ. ಇದೀಗ ಒಂದು ಅಥವಾ ಎರಡು ಸಂಸ್ಥೆಗಳ ಅನುಕೂಲಕ್ಕಾಗಿ ಇ-ಬೈಕ್‌ ಟ್ಯಾಕ್ಸಿ ತರುವ ಮೂಲಕ ಲಕ್ಷಾಂತರ ಚಾಲಕರ ಜೀವನಕ್ಕೆ ಕೊಳ್ಳಿ ಇಡುವಂತಾಗಿದೆ” ಎಂದು ಯುನಿಯನ್ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಶೀಘ್ರವೇ ಎಲೆಕ್ಟ್ರಿಕ್‌ ಬೈಕ್ (ಇ-ಬೈಕ್) ಟ್ಯಾಕ್ಸಿ ಸೇವೆಗಳು ಪ್ರಾರಂಭವಾಗಿಲಿದ್ದು, ಸಾರಿಗೆ ಇಲಾಖೆಯು ಅದರ ಕಾರ್ಯಾಚರಣೆಗೆ ಅನುಮೋದನೆ ನೀಡಲಿದೆ. ಅಧಿಕಾರಿಗಳ ಪ್ರಕಾರ, ಇ-ಬೈಕನ್ನು ಟ್ಯಾಕ್ಸಿಯಾಗಿ ನೋಂದಾಯಿಸಲು ವ್ಯಕ್ತಿಗಳಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇದರಂತೆ ವೈಯಕ್ತಿಕವಾಗಿ ಅಥವಾ ಒಂದು ಸಂಸ್ಥೆಯಾಗಿ ರಿಜಿಸ್ಟರ್‌ ಮಾಡಿ ಈ ಸೇವೆಯನ್ನು ನೀಡಬಹುದಾಗಿದೆ.

ಇ-ಬೈಕ್ ಟ್ಯಾಕ್ಸಿಗಳು ಆರಂಭದಲ್ಲಿ ಬೆಂಗಳೂರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ ಮತ್ತು ನಂತರ ರಾಜ್ಯದಾದ್ಯಂತ ಇತರ ನಗರ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು.

ಇದನ್ನೂ ಓದಿ: ಫೋನ್‌ ಹ್ಯಾಕ್‌ ಮಾಡಿದ ನಂತರವೂ ಬಿಜೆಪಿ ಚುನಾವಣೆಯನ್ನು ಗೆಲ್ಲಲು ಆಗಲಿಲ್ಲ; ಟಿಎಂಸಿ ವ್ಯಂಗ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights