ಅದ್ಭುತ ಕ್ಯಾಚ್ ಹಿಡಿದ ಪಂಜಾಬ್ ತಂಡದ ರವಿ ಬಿಷ್ಣೋಯ್; ಆದರೂ ತಂಡದ ಸೋಲಿಗೆ ಅವರೇ ಕಾರಣ?
ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಮ್ಯಾಚ್ನಲ್ಲಿ ಪಂಜಾಬ್ ತಂಡ ಸೋಲುಂಡಿದೆ. ಆಟದಲ್ಲಿ ಪಂಜಾಬ್ ತಂಡದ ರವಿ ಬಿಷ್ಣೋಯ್ ಅದ್ಬುತವಾಗಿ ಕ್ಯಾಚ್ ಹಿಡಿದರು. ಆದರೆ, ತಂಡದ ಸೋಲಿಗೂ ಅವರೇ ಕಾರಣ ಎಂದು ಟೀಕೆಗಳು ವ್ಯಕ್ತವಾಗಿವೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ಅಧಿಕ ರನ್ಗಳಿಸಲು ಪರದಾಡಿತ್ತು. ಹರಸಾಹಸ ಪಟ್ಟು 124 ರನ್ಗಳನ್ನು ಕಲೆಹಾಕಿತ್ತು. ಈ ರನ್ಗಳ ಬೆನ್ನತ್ತಿದ ಕೊಲ್ಕತ್ತಾ ತಂಡವು ಆರಂಭದಲ್ಲಿಯೇ ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಕೆಕೆಆರ್ ತಂಡದ ಸುನೀಲ್ ನರೈನ್ ಬ್ಯಾಟಿಂಗ್ ಮಾಡಿದ ಚೆಂಡು ಭಾರೀ ಎತ್ತರಕ್ಕೆ ಹಾರಿತು. ಆ ಬಾಲ್ನಲ್ಲಿ ಶರವೇಗದಲ್ಲಿ ಓಡಿಬಂದ ರವಿ ಬಿಷ್ಣೋಯ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದರಿಂದಾಗಿ ಸುನೀಲ್ ನರೈನ್ ಔಟ್ ಆದರು.
ಕ್ಯಾಚ್ ಹಿಡಿದ ನಂತರ ಪಂಚಾಜ್ ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ, ಕೆಲವೇ ಬಾಲ್ಗಳ ನಂತರ ಮತ್ತೆ ತನ್ನೆಡೆಗೆ ಬಂದ ಎರಡು ಬಾಲ್ಗಳನ್ನು ಬೌಂಡರಿ ತಲುಪದಂತೆ ತಡೆಯುವಲ್ಲಿ ರವಿ ಬಿಷ್ಣೋಯ್ ವಿಫಲರಾದರು. ಅವರು ಬಿಟ್ಟುಕೊಟ್ಟ ಎರಡು ಬೌಂಡರಿಗಳಿಂದಾಗಿ ಕೆಕೆಆರ್ 08 ರನ್ಗಳನ್ನು ಪಡೆದುಕೊಂಡಿತು. ಇದರಿಂದಾಗಿ ಕೆಕೆಆರ್ ರನ್ ರೇಟ್ಅನ್ನು ನಿಯಂತ್ರಿಸಿದ್ದ ಪಂಜಾಬ್ ತಂಡಕ್ಕೆ ಭಾರೀ ಕಷ್ಟವಾಯಿತು. ಅಲ್ಲದೆ, ತಂಡ ಸೋಲುನುಭವಿಸಿತು.
Vivo perfect catch of the match#RaviBishnoi #IPL2021 pic.twitter.com/nzFldLMcPn
— मनोहर भादू विश्नोई (@mbbishnoi) April 27, 2021
ಇದು ಪಂಜಾಬ್ ತಂಡ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಬಿಷ್ಣೋಯ್ ಎರಡು ಬೌಂಡರಿ ಬಿಟ್ಟುಕೊಟ್ಟಿದ್ದೆ ಸೋಲಿನ ಕಾರಣ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: RCB ಸೋಲಿನ ಬೆನ್ನಲ್ಲೇ ಮತ್ತೊಂದು ಶಾಕ್; ತಂಡದಿಂದ ಹೊರ ನಡೆದ ಇಬ್ಬರು ಆಟಗಾರರು!

