ಕೊರೊನಾ ಲಸಿಕೆ ಪಡೆಯುವ ಯುವಜನರಿಗೆ 7500 ರೂ ಬಹುಮಾನ: ಅಮೆರಿಕಾದ ವರ್ಜೀನಿಯಾ ಘೋಷಣೆ!

ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾದ ಎರಡನೇ ಅಲೆಯು ತೀವ್ರತೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಕೊರೊನಾಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಅಮೆರಿಕಾ, ಈ ವರ್ಷ ಎಚ್ಚೆತ್ತುಕೊಂಡಿದ್ದು, ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ ಸಫಲವಾಗುತ್ತಿದೆ. ಅಲ್ಲದೆ, ಕೊರೊನಾ ವಿರುದ್ಧ ವ್ಯಾಕ್ಸಿನ್‌ ನೀಡಲಾಗುತ್ತಿದ್ದು, ಲಸಿಕೆ ಪಡೆಯುವ ಯುವಜನರಿಗೆ ತಲಾ 7500 ರೂ ಬಹುಮಾನ ನೀಡುವುದಾಗಿ ಅಮೆರಿಕಾದ ವರ್ಜೀನಿಯಾ ರಾಜ್ಯವು ಘೋಷಿಸಿದೆ.

ಜುಲೈ 04 ಅಮೆರಿಕಾ ಹೊಂದಿದ ಸ್ವಾತಂತ್ರ್ಯ ದಿನವಾಗಿದ್ದು, ಅಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷದ ಜುಲೈ 04ರ ವೇಳೆಗೆ ಅಮೆರಿಕಾವು ಕೊರೊನಾ ದಿನಲೂ ಸ್ವಾತಂತ್ರ್ಯ ಪಡೆಯಬೇಕು ಎಂದು ಉದ್ದೇಶಿಸಿದ್ದು, ಆ ವೇಳೆಗೆ ದೇಶವನ್ನು ಕೊರೊನಾ ಮುಕ್ತ ಮಾಡಬೇಕು ಎಂದು ಯುಎಸ್‌ಎ ಅಧ್ಯಕ್ಷ ಜೋ ಬೈಡನ್‌ ಪಣತೊಟ್ಟಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ಆದರೆ, ಲಸಿಕೆ ಪಡೆಯಲು ಅಲ್ಲಿನ ಯುವಜನರು ಹಿಂದೇಟು ಹಾಕುತ್ತಿದ್ದಾರ. ಹೀಗಾಗಿ ಯುವಜನರು ಲಸಿಕೆ ಪಡೆಯುವಂತೆ ಸೆಳೆಯುವುದಕ್ಕಾಗಿ ಲಸಿಕೆ ಪಡೆಯುವವರಿಗೆ 7500 ರೂ ಬಹುಮಾನ ನೀಡುವುದಾಗಿ ವರ್ಜೀನಿಯಾ ಘೋಷಿಸಿದೆ.

ಅಮೆರಿಕಾದಲ್ಲಿ ಇದೂವರೆಗೂ 5.8 ಲಕ್ಷ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದು ಎರಡನೇ ಮಹಾಯುದ್ದದಲ್ಲಿ ಮಡಿದ ಅಮೆರಿಕನ್ನರ ಸಂಖ್ಯೆಯನ್ನೂ ಮೀರಿಸಿದೆ ಎಂದು ಹೇಳಲಾಗಿದೆ. ಎರಡನೇ ಮಹಾಯುದ್ದದಲ್ಲಿ 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದರು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಿಂದ ಭಾರತಕ್ಕೆ ಆಕ್ಸಿಜನ್‌ ನೆರವು: ಮಂಗಳವಾರ ಆಕ್ಸಿಜನ್‌ ರವಾನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights