ದೇಶದಲ್ಲಿ ಒಂದೇ ದಿನ 4.12 ಲಕ್ಷ ಹೊಸ ಕೊರೊನಾ ಕೇಸ್ : 3,980 ಜನ ಬಲಿ!

ಭಾರತ ಗುರುವಾರ ಹೊಸದಾಗಿ 4,12,262 ಹೊಸ ಕೋವಿಡ್ ಪ್ರಕರಣಗಳು ಮತ್ತು 3,980 ಸಾವುಗಳನ್ನು ದಾಖಲಿಸಿದ್ದು, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,10,77,410 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಒಂದೇ ದಿನದಲ್ಲಿ 4,01,993 ಹೊಸ ಪ್ರಕರಣಗಳು ವರದಿಯಾಗಿದ್ದರಿಂದ ಭಾರತ ಶನಿವಾರ ನಂತರ ಸ್ವಲ್ಪ ಪ್ರಕರಣಗಳಲ್ಲಿ ಕುಸಿತ ಕಂಡಿದೆ.

4,12,262 ಹೊಸ ಕೋವಿಡ್ ಪ್ರಕರಣಗಳಲ್ಲಿ 57,640 ಪ್ರಕರಣಗಳು ಮಹಾರಾಷ್ಟ್ರ, 50,112 ಪ್ರಕರಣಗಳು ಕರ್ನಾಟಕ, 41,953 ಪ್ರಕರಣಗಳು ಕೇರಳ, ಉತ್ತರ ಪ್ರದೇಶ 31,111 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ 23,310 ಪ್ರಕರಣಗಳು ದಾಖಲಾಗಿವೆ.

ಈ ಐದು ರಾಜ್ಯಗಳಿಂದ ಸುಮಾರು 49.52 ರಷ್ಟು ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಮಾತ್ರ ಹೊಸ ಪ್ರಕರಣಗಳಲ್ಲಿ ಶೇಕಡಾ 13.98 ರಷ್ಟಿದೆ.

ಮಹಾರಾಷ್ಟ್ರದಲ್ಲಿ 920 ಸಾವುಗಳು ಸಂಭವಿಸಿವೆ, ಉತ್ತರಪ್ರದೇಶದಲ್ಲಿ 353 ಸಾವುನೋವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ 3,29,113 ಜನರನ್ನು ಡಿಸ್ಚಾರ್ಜ್‌ ಮಾಡಲಾಗಿದ್ದು, ದೇಶದ ಒಟ್ಟು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 1,72,80,844 ಆಗಿದೆ. ಸಕ್ರಿಯ ಪ್ರಕರಣಗಳು 35,66,398ರಷ್ಟಿದೆ. ಪ್ರಸ್ತುತ ದೇಶದಲ್ಲಿ ಸಾವಿನ ಸಂಖ್ಯೆ 23,01,68ಕ್ಕೆ ಏರಿಕೆ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights