ಟಿಕ್ರಿ ಗಡಿಯಲ್ಲಿ ಪ್ರತಿಭಟನಾನಿರತ 25 ವರ್ಷದ ಮಹಿಳೆ ಕೋವಿಡ್ನಿಂದ ಸಾವು!
ನೂರಾರು ರೈತರೊಂದಿಗೆ ಟಿಕ್ರಿ ಗಡಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದ 25 ವರ್ಷದ ಮಹಿಳೆ ಕೋವಿಡ್ -19 ನಿಂದ ಬಳಲಿ ಸಾವನ್ನಪ್ಪಿದ್ದಾಳೆ.
ಹರಿಯಾಣ ಸರ್ಕಾರದ ಪ್ರಕಾರ, ಮೋಮಿತಾ ಎಂದು ಗುರುತಿಸಲ್ಪಟ್ಟ ಮಹಿಳೆ ಪಶ್ಚಿಮ ಬಂಗಾಳದ ನಿವಾಸಿ. ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ ರೈತರಲ್ಲಿ ಮೊಮಿತಾ ಕೂಡ ಇದ್ದರು.
ದೆಹಲಿಯ ಹೊರಗಿನ ಟಿಕ್ರಿ ಗಡಿಯಲ್ಲಿ ಅವರು ಹಲವಾರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಏಪ್ರಿಲ್ 26 ರಂದು, ಮೊಮಿತಾ ಅವರಲ್ಲಿ ಕೋವಿಡ್ -19 ಲಕ್ಷಣಗಳು ಕಂಡುಬಂದವು.
ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು, “ಮೊಮಿತಾ ಎಂಬ ಹುಡುಗಿಗೆ ಏಪ್ರಿಲ್ 26 ರಂದು ಜ್ವರ ಬಂತು, ನಂತರ ಅವರನ್ನು ಜಿಹೆಚ್ ಬಹದ್ದೂರ್ಗಢ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರಿಗೆ ಅಲ್ಲಿ ಹಾಸಿಗೆ ಸಿಗಲಿಲ್ಲ” ಎಂದು ಹೇಳಿದರು.
ನಂತರ ಆಕೆಯನ್ನು ಪಿಜಿಐಎಂಎಸ್ ರೋಹ್ಟಕ್ಗೆ ಕರೆದೊಯ್ಯಲಾಯಿತು, ಅದು ಕೋವಿಡ್ -19 ರೋಗಿಗಳಿಂದ ಕೂಡಿತ್ತು. ನಂತರ ಮೋಮಿತಾ ಅವರನ್ನು ಬಹದ್ದೂರ್ಗಢದ ಶಿವಂ ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ದಾಖಲಿಸಲಾಯಿತು. ಆದರೆ ಅಷ್ಟೊತ್ತಿಗೆ ಆಕೆಯ ಸೋಂಕು ಪ್ರಗತಿಯಾಗಿ ಶುಕ್ರವಾರ ಬೆಳಿಗ್ಗೆ ಅವರು ತೀರಿಕೊಂಡರು.
ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಕೊರೊನಾವನ್ನು ಲೆಕ್ಕಿಸದೇ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ದೆಹಲಿಯ ಹೊರಗಿನ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಹಲವಾರು ತಿಂಗಳುಗಳಿಂದ ಕ್ಯಾಂಪಿಂಗ್ ಮಾಡಿ ಹೋರಾಟ ಮಾಡುತ್ತಿದ್ದಾರೆ.
ಇಲ್ಲಿಯವರೆಗೆ, ಪ್ರತಿಭಟನಾ ಸಂಘಗಳು ಮತ್ತು ಸರ್ಕಾರದ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆ, ಆದರೆ ಎರಡೂ ಕಡೆಯವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಅಸ್ತವ್ಯಸ್ತತೆ ಮುಂದುವರೆದಿದೆ.