ತಮಿಳುನಾಡಿನ ಕಡಲೂರಿನಲ್ಲಿ ಬಾಯ್ಲರ್ ಸ್ಫೋಟ: 4 ಜನ ಸಾವು – 15 ಮಂದಿಗೆ ಗಾಯ!

ತಮಿಳುನಾಡಿನ ಕಡಲೂರಿನಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು ನಾಲ್ಕು ಜನ ಸಾವನ್ನಪ್ಪಿದ್ದು 15 ಮಂದಿ ಗಾಯಗೊಂಡಿದ್ದಾರೆ.

ಕಡಲೂರು ಬಳಿಯ ಕುಡಿಕಾಡು ಗ್ರಾಮದ ಸಿಪ್ಕಾಟ್ ಕೈಗಾರಿಕಾ ಎಸ್ಟೇಟ್ನಲ್ಲಿನ ಕೀಟನಾಶಕ ಉತ್ಪಾದನಾ ಉದ್ಯಮದಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಹದಿನೈದು ಜನರಿಗೆ ಗಾಯಗಳಾಗಿವೆ.

ಬೆಳಿಗ್ಗೆ 07:45 ಕ್ಕೆ ಕ್ರಿಮ್ಸನ್ ಆರ್ಗಾನಿಕ್ಸ್ ರಾಸಾಯನಿಕ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ರಾಜ್‌ಕುಮಾರ್ (42), ಗಣಪತಿ (25), ಸವಿತಾ (35), ವಿಶೇಶ್ ರಾಜ್ (25) ಎಂದು ಗುರುತಿಸಲಾಗಿದೆ. ಈ ಘಟಕದಲ್ಲಿ 19 ಸಾಮಾನ್ಯ ಕಂಪನಿ ಸಿಬ್ಬಂದಿ ಮತ್ತು 18 ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. “ಬಾಯ್ಲರ್ ಮಿಕ್ಸರ್ ಯಂತ್ರದಿಂದ ರಾಸಾಯನಿಕ ಅನಿಲ ಹೊರಹೊಮ್ಮಿ ಬೆಂಕಿ ಕಾಣಿಸಿಕೊಂಡು ಸ್ಪೋಟಗೊಂಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಹೆದರಿ ಸ್ಥಳೀಯ ಸುತ್ತಮುತ್ತಲಿನ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಘಟಕದಿಂದ ದಟ್ಟವಾದ ಹೊಗೆಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಂದ ಮಾಹಿತಿ ಪಡೆದ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಯ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿದರು. ಅವರು ಒಳಗೆ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಸ್ತುತ ಕೋವಿಡ್ -19 ನಿರ್ಬಂಧಗಳ ಪ್ರಕಾರ, ಶೇಕಡಾ 50 ರಷ್ಟು ಉದ್ಯೋಗಿಗಳು ಮಾತ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಪ್ರಯತ್ನಿಸುವಾಗ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ.

ಕಾರ್ಮಿಕ ಕಲ್ಯಾಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಸಿ.ವಿ. ಗಣೇಶನ್ ಅವರು ಕಡಲೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ಘಟನೆಯನ್ನು ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು ಮತ್ತು ಮೃತ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸರಿಯಾದ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು. ಜೊತೆಗೆ ತನಿಖೆಗೆ ಆದೇಶಿಸಿದ್ದಾರೆ.

Tamil nadu blast, TN boiler blast, boiler blast in Cuddalore, Cuddalore blast, Tamil nadu govt, Tamil Nadu news, India news, Indian express

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights