ಸಾಹುಕಾರ ಸಿಡಿ ಪ್ರಕರಣ : ಇಂದು ಅಧಿಕೃತವಾಗಿ ಪೊಲೀಸರಿಗೆ ಹಸ್ತಾಂತರ…!

ಭಾರೀ ಗೊಂದಲ ಸೃಷ್ಟಿ ಮಾಡಿದ್ದ ಸಾಹಕಾರ ಸಿಡಿ ಪ್ರಕರಣ ಇಂದು ಅಧಿಕೃತವಾಗಿ  ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಗೃಹ ಇಲಾಖೆ ಕಾರ್ಯದರ್ಶಿಯಿಂದ ಪೋಲೀಸ್ ಆಯುಕ್ತರಿಗೆ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹಸ್ತಾಂತರ ಆಗಲಿದೆ. ಸಿಡಿ ವಿಚಾರಣೆಯಲ್ಲಿ 4 ರಿಂದ 5 ಪೊಲೀಸ್ ಇನ್ಪಪೆಕ್ಟರ್, ಎಸಿಪಿ –ಡಿಸಿಪಿ, ಇಬ್ಬರು ಟೆಕ್ನಿಕಲ್ ಟೀಂ ಇರಲಿದೆ.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಹಾಗೂ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಜೊತೆ ಸಿಡಿ ಬಗ್ಗೆ ಚರ್ಚೆ ನಡೆಯಲಿದೆ.

ಪ್ರಕರಣ ಸಂಬಂಧ ಚರ್ಚಿಸಿ ಪೊಲೀಸರು ಸಿಡಿ ಅಸಲಿಯತ್ತು ಪರಿಶೀಲನೆ ಮಾಡಲಾಗಿದ್ದಾರೆ. ಸತ್ಯಾಸತ್ಯತೆ ಪತ್ತೆ ಹಚ್ಚಲು ಮಾತ್ರ ಎಸ್ಐಟಿ ಗೆ ಸಿಡಿ ತನಿಖೆ ವಹಿಸಲಾಗಿದೆ.

ಬಜೆಟ್ ಅಧಿವೇಶ ನಡೆಯುತ್ತಿರುವುದರಿಂದ ವಿಪಕ್ಷ ನಾಯಕರು ಪ್ರಶ್ನೆ ಮಾಡುವ ಸಾಧ್ಯತೆ ಇದ್ದು ಹೀಗಾಗಿ ಬಿಜೆಪಿ ಬೀಸೋ ದೊಣ್ಣೆಯಿಂದ ತಪ್ಪಿಸಲಿಕೊಳ್ಳಲು ರಮೇಶ್ ಸಿಡಿ ವಿಚಾರವನ್ನು ಎಸ್ಐಟಿ ತನಿಖೆಗೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯವಾಗಿ ಎಸ್ಐಟಿಗೆ ತನಿಖಾ ಅವಧಿ ಇಲ್ಲ. ಎಷ್ಟು ದಿನಗಳು ಬೇಕಾದರೂ ತನಿಖೆ ನಡೆಯಬಹುದು. ಇಷ್ಟೇ ದಿನದಲ್ಲಿ ಸಿಡಿ ಬಗ್ಗೆ ತನಿಖೆಯಾಗಬೇಕೆಂದಿಲ್ಲ. ಹೀಗಾಗಿ ಇದು ಯಾವಾಗಾ ಪೂರ್ಣಗೊಳ್ಳುತ್ತದೆ ಎಂದೇಳಲು ಸಾಧ್ಯವೇ ಇಲ್ಲ. ಆದರಿಂದ ಇದು ಎಸ್ಐಟಿ ತನಿಖೆ ವಹಿಸಿದ್ದು ತಿಪ್ಪೆ ಸಾರಿಸೋ ಕೆಲಸ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ದೂರಿದ್ದರು.

ಆದರೆ ಇದರಲ್ಲಿ ಪೊಲೀಸ್ ಕೂಡ ಭಾಗಿಯಾಗುವುದರಿಂದ ತನಿಖೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದರೆ ಯಾವಗ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ ಎಂದು ಕಾದುನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights