ಲಾಕ್ ಡೌನ್ ನಡುವೆಯೂ ಸೂಟ್‍ಕೇಸ್‍ನೊಳಗೆ ಗೆಳತಿಯನ್ನು ಸಾಗಿಸುತ್ತಿದ್ದ ಭೂಪ..!

ಕೊರೊನಾ ಹರಡುವ ಭಯದಿಂದ ಜನ ಮನೆ ಬಿಟ್ಟು ಹೊರಬರಲು ನಿರ್ಬಂಧ ಹೇರಲಾಗಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನಗೆ ಬೋರ್ ಆಗ್ತಿದೆ ಎಂದು ಗೆಳತಿಯನ್ನು ಸೂಟ್‍ಕೇಸ್‍ನೊಳಗೆ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹೌದು… ರಾಜ್ಯದೆಲ್ಲೆಡೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜನ ಮನೆ ಬಿಟ್ಟು ಹೊರಬರುವುದಕ್ಕೆ ಸಾಕಷ್ಟು ನಿರ್ಬಂಧ ಹೇರಲಾಗಿದೆ. ಇನ್ನೂ ಅಪಾರ್ಟ್ ಮೆಂಟ್ ಗಳಲ್ಲಿ ವಾಸವಿರುವವರ ಕಥೆಯಂತೂ ಹೇಳೋ ಹಾಗೇ ಇಲ್ಲ. ನೂರಾರು ಜನ ವಾಸವಿರುವ ಅಪಾರ್ಟ್ ಮೆಂಟ್ ಗಳಲ್ಲಿ ಜನ ಹೊರಬರುವಂತೆಯೇ ಇಲ್ಲ. ಹೀಗಾಗಿ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳತಿಯನ್ನು ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ನಡೆದಿದೆ.

ತನ್ನ ಗೆಳತಿಯನ್ನು ಕರೆತರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ. ಆದರೆ ಆರ್ಯ ಸಮಾಜದ ವಸತಿ ಸಮುಚ್ಚಯ ಇದನ್ನು ಒಪ್ಪಿಲ್ಲ. ಬಳಿಕ ಆತ ುಪಾಯವೊಂದನ್ನ ಮಾಡಿದ್ದಾನೆ. ಅದರಂತೆಯೇ ಗೆಳೆಯನನ್ನು ಸೂಟ್ ಕೇಸ್‍ನಲ್ಲಿ ತುಂಬಿಸಿ ಕರೆ ತರುವ ಪ್ರಯತ್ನ ಮಾಡಿದ್ದಾನೆ. ಆದರೆ ಕರೆ ತರುವಾಗ ಸೂಟ್‍ಕೇಸ್‍ನಲ್ಲಿ ಸಂಚಲನ ಕಂಡು ಬಂದಾಗ ಸಮುಚ್ಚಯದವರು ಸೂಟ್‍ಕೇಸ್ ತೆರೆಯುವಂತೆ ಹೇಳಿದ್ದಾರೆ. ಆಗ ವಿದ್ಯಾರ್ಥಿ ಗಾಬರಿಯಾಗಿದ್ದಾನೆ. ಈ ವೇಳೆ ಅನುಮಾನ ಬಂದು ಸೂಟ್ ಕೇಸ್ ತೆಗೆದು ನೋಡಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದಾನೆ. ಕೋಡಲೇ ಪೊಲೀಸ್ ಇಲಾಖೆಗೆ ಸಮುದಾಯ ಮಾಹಿತಿ ನೀಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಯ ವಿಚಾರಣೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights