ಒಳ್ಳೆ ಸುದ್ದಿ – ಶೌಚ ವಾಸದಿಂದ ಮುಕ್ತಿ ಸೂರು ಕೇಳಿದ್ದ ಕೂಗಿಗೆ ಸಿಕ್ತು ಆಶ್ರಯ..

ಆ ಎರಡು ಕುಟುಂಬಗಳು 7 ವರ್ಷಗಳಿಂದ ನರಕದ ಕೂಪದಲ್ಲಿ ಬದುಕುತ್ತಿತ್ತು. ಸಹಜವಾಗಿ ಆ ಜಾಗಕ್ಕೆ ಹೋದ್ರೆ ಮೂಗು ಮುಚ್ಚಿಕೊಳ್ಳುವ ನಾವು ಅಲ್ಲಿ ಬುದುಕುತ್ತಾರೆ ಅನ್ನೋದನ್ನೆ ಕಲ್ಪನೆ ಕೂಡ ಮಾಡಿಕೊಳ್ಳೋಲ್ಲ. ಮೈಸೂರಿನ 13 ಮಂದಿ ಶೌಚಾಲಯದಲ್ಲಿ ವಾಸವಿದ್ದ ಘಟನೆ ನಾಗರೀಕ ಸಮಾಜವನ್ನೆ ತಲೆತಗ್ಗಿಸುವಂತೆ ಮಾಡಿತ್ತು. ಕೊನೆಗು ಶೌಚಾಲಯ ವಾಸದಿಂದ ಮುಕ್ತಿ ಪಡೆದ ಕುಟುಂಬ ಇಂದು ಆಶ್ರಯ ಮನೆ ಸೇರಿ ಹೊಸ ಸೂರು ಕಂಡುಕೊಂಡಿದೆ.

ನ್ಯೂಸ್‌ಕನ್ನಡ ವರದಿ ಫಲಶ್ರುತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೌಚಾಲಯದಲ್ಲಿ ಬದುಕಿತ್ತಿದ್ದ13 ಮಂದಿಗೆ ಮುಕ್ತಿ ಸಿಕ್ಕಿದ್ದು ಇಂದು ಬಡ ಕುಟುಂಬ ಎಲ್ಲ ಸದಸ್ಯರು ಶೌಚಾಲಯದಿಂದ ಆಶ್ರಯಮನೆಗೆ ಸ್ಥಳಾಂತರಗೊಂಡಿದ್ದಾರೆ. ಡಿ.17ರಂದು ವರದಿ ನೋಡಿ ಬೆನ್ನತ್ತಿ ಬಡಕುಟುಂಬಕ್ಕೆ ಅಧಿಕಾರಿಗಳು ಕೊಟ್ಟ ಭರವಸೆಯನ್ನು ಈಡೇರಿಸಲು ಸಹಕಾರಿಯಾಗಿದೆ. ಇಂದು ಹೊಸಮನೆಗೆ ಬಂದ ಬಡಕುಟುಂಬಸ್ಥರು ಮನೆ ನೀಡಿದ ಅಧಿಕಾರಿಗಳಿಗು ಧನ್ಯವಾದ ಹೇಳಿದ್ದಾರೆ.

ಮೈಸೂರಿನ ರಾಜೇಂದ್ರನಗರದಲ್ಲಿರುವ ಎ ಬ್ಲಾಕ್‌ನಲ್ಲಿ ಬಡಕುಟುಂಬವೊಂದು ಮನೆ ಇಲ್ಲದೆ ಸ್ಥಗಿತವಾಗಿದ್ದ ಸಾರ್ವಜನಿಕ ಶೌಚಾಲಯವನ್ನೆ ತಮ್ಮ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. 7 ತಿಂಗಳ ಮಗುವಿನೊಂದಿಗೆ 95 ವರ್ಷದ ವೃದ್ದೆಯವರೆಗು ಒಟ್ಟು 13 ಈ ಶೌಚಾಲದಯಲ್ಲಿ ಜೀವನ ಸಾಗಿಸುತ್ತಿದ್ದರು. ಕಳೆದ 7 ವರ್ಷಗಳಿಂದ ಶೌಚಾಲಯದಲ್ಲೆ ವಾಸವಿದ್ದ ಎರಡು ಕುಟುಂಬದ 13 ಮಂದಿ ನರಕದರ್ಶನದಲ್ಲೆ ಬದುಕಿತ್ತಿದ್ದರು. ಡಿ.17ರಂದು ಬೆಳಗ್ಗೆ ನ್ಯೂಸ್‌ಕನ್ನಡದಲ್ಲಿ ಈ ಕುರಿತು ವರದಿ ಪ್ರಸಾರ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅಂದು ನ್ಯೂಸ್‌ಮೂಲಕ ಭರವಸೆ ನೀಡಿದ್ದಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಾರದೋಳಗೆ ಶೌಚಾಲಯದಿಂದ ಮುಕ್ತಿ ನೀಡುವುದಾಗಿ ಹೇಳಿದ್ರು. ಅಂತೇ ಇಂದು ಶೌಚಾಲಯದಲ್ಲಿ ವಾಸವಿದ್ದ 13 ಮಂದಿಯನ್ನು ಸಮೀಪದಲ್ಲೆ ಇದ್ದ ಯಲ್ಲಮ್ಮ ಕಾಲೋಮಿಯ ನರ್ಮ್‌ಯೋಜನೆಯ ಆಶ್ರಯ ಮನೆಗೆ ಸ್ಥಳಾಂತರ ಮಾಡಲಾಯಿತು. ಮನೆ ಸಿಕ್ಕ ಸಂತಸದಲ್ಲಿ ಆ ಬಡಕುಟುಂಬ ನಗುತ್ತಲೆ ಹೊಸ ಮನೆಗೆ ಕಾಲಿಟ್ಟರು.

ಕಳೆದ 7 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೆ ಬದುಕು ಕಟ್ಟಿಕೊಂಡಿದ್ದ ಮೈಸೂರಿನ ರಾಜೇಂದ್ರನಗರ ನಿವಾಸಿ ಬಿಂದು ಹಾಗೂ ಕೃಷ್ಮಮ್ಮರ ಕುಟುಂಬಕ್ಕೆ ಕೊನೆಗು ಶೌಚಾಲಯದಿಂದ ಮುಕ್ತಿ ಸಿಕ್ಕಿದೆ. ಇಂದು ಖುದ್ದಿ ಕೊಳಗೇರಿ ಮಂಡಳಿ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯ ಪ್ರದೀಪ್‌ಚಂದ್ರ ಬಿಂದು ಹಾಗೂ ಕೃಷ್ಣಮ್ಮರ ಕುಟುಂಬವನ್ನ ಸಮೀಪದಲ್ಲೆ ಇದ್ದ ಆಶ್ರಯ ಮನೆಗೆ ಸ್ಥಳಾಂತರ ಮಾಡಿದ್ದಾರೆ. ಮೈಸೂರಿನ ಬನ್ನಿಮಂಟಪ ಕೈಗಾರಿಕ ಪ್ರದೇಶದ ಯಲ್ಲಮ್ಮ ಕಾಲೋನಿಯ ಬಳಿ ಜೆಎನ್‌ನರ್ಮ್‌ಯೋಜನೆಯಲ್ಲಿ ನಿರ್ಮಾಣವಾಗಿದ್ದ ಆಶ್ರಯ ಮನೆಯಲ್ಲಿ ಮೂರನೆ ಮಹಡಿಯ ಟಿ2 ಮನೆಯನ್ನ ಬಿಂದು ಹಾಗೂ ಕೃಷ್ಣಮ್ಮ ಕುಟುಂಬಕ್ಕೆ ನೀಡಲಾಗಿದೆ. ಶೌಚಾಲಯದಂತೆ ನರಕದ ಬದುಕಿನಲ್ಲಿದ್ದ ನಮಗೆ ಬದಕಲು ಸೂರು ನೀಡಿದ್ದಕ್ಕೆ ಕೃಷ್ಣಮ್ಮ ಭಾವುಕಳಾಗಿದ್ದಾರೆ. ಮನೆ ನೀಡಿದ ಅಧಿಕಾರಿಗಳಿಗೆ ಕೈ ಮುಗಿದು ಧನ್ಯವಾದ ಹೇಳಿದ್ರು.

ಇನ್ನು ಎರಡು ಕುಟುಂಬದಿಂದ 13 ಮಂದಿ ಶೌಚಾಲಯದಲ್ಲಿ ವಾಸವಿದ್ದ ಕಾರಣ ಸದ್ಯಕ್ಕೆ ತಾತ್ಕಾಲಿಕವಾಗಿ ಒಂದು ಮನೆ ನೀಡಲಾಗಿದ್ದು, ಮತ್ತೊಂದು ಮನೆ ಬೇಕು ಅನ್ನೋ ಈ ಕುಟುಂಬಸ್ಥರ ಬೇಡಿಕೆಯನ್ನ ಅಧಿಕಾರಿಗಳು ಶೀಘ್ರವೇ ಈಡೇರಿಸುವ ಭರವಸೆ ನೀಡಿದ್ದಾರೆ. ಇಂದು ಹೊಸ ಮನೆಗೆ ಬಂದ ಬಿಂದು ಕುಟುಂಬ ಆ ದುರ್ವಾಸನೆ ಮಧ್ಯೆ ಬದುಕೋಕಿಂತ ಇದು ನೂರು ಪಟ್ಟು ಪರವಾಗಿಲ್ಲ ನಾವು ಸಂತೋಷದಿಂದಲೇ ಈ ಮನೆಗೆ ಬಂದ್ದೇವೆ ಅಂತಾರೆ ಶೌಚಾಲಯದಿಂದ ಬಂದ ಬಿಂದು. ನ್ಯೂಸ್‌ಕನ್ನಡ ವರದಿ ಬಿತ್ತರಿಸಿ ಫಲಕಶ್ರುತಿಯಾಗಿ ಶೌಚಾಲಯದಲ್ಲಿ ಬದುಕುತ್ತಿದ್ದ ಬಡಕುಟುಂಬವೊಂದು ಆಶ್ರಯದ ಸೂರಿಗೆ ಸೇರಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights