ದೇಶದಲ್ಲಿ 3.43 ಲಕ್ಷ ಹೊಸ ಕೋವಿಡ್ ಕೇಸ್ : ಸತತ 3 ನೇ ದಿನವೂ 4,000 ಜನ ಬಲಿ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೈ ಮೀರಿ ಹೋಗುತ್ತಿದ್ದು ಸತತ ಮೂರನೇ ದಿನವೂ ಸಾವಿನ ಸಂಖ್ಯೆ 4,000ಕ್ಕೂ ಹೆಚ್ಚಾಗಿ ದಾಖಲಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 3.43 ಲಕ್ಷ ಹೊಸ ಕೊರೊನಾ ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತ 3,43,144 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ಮತ್ತು 4,000 ಸಾವುಗಳನ್ನು ದಾಖಲಿಸಿದೆ. ಭಾರತ ಸತತ ಮೂರನೇ ದಿನವೂ 4,000 ಸಾವುಗಳನ್ನು ದಾಖಲಿಸಿದೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಮಹಾರಾಷ್ಟ್ರದಲ್ಲಿ 42,582 ಪ್ರಕರಣಗಳು, ಕೇರಳದಲ್ಲಿ 39,955 ಪ್ರಕರಣಗಳು, ಕರ್ನಾಟಕ 35,297 ಪ್ರಕರಣಗಳು, ತಮಿಳುನಾಡು 30,621 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 22,399 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,000 ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ (850) ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ನಂತರ ಕರ್ನಾಟಕದಲ್ಲಿ 344 ಸಾವುಗಳು ಸಂಭವಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights