ಗಾಜಾ ಸಂಘರ್ಷ ಉಲ್ಬಣ : ವಾಯುದಾಳಿಗಳು ಮುಂದುವರಿಯಲಿವೆ ಎಂದ ಇಸ್ರೇಲಿ ಪ್ರಧಾನಿ!

ಪ್ಯಾಲೆಸ್ತೀನ್ ಮೇಲಿನ ಆಕ್ರಮಣವನ್ನು ಇಸ್ರೇಲ್ ಮುಂದುವರೆಸುತ್ತಲೇ ಇದೆ. ಇಸ್ರೇಲ್ ನ ವಾಯು ದಾಳಿಗೆ ಗಾಜಾ ನಗರದಲ್ಲಿನ ಮೂರು ಕಟ್ಟಡಗಳು ಭಾನುವಾರ ಧರಾಶಾಯಿಯಾಗಿದ್ದು, 41 ಮಕ್ಕಳು ಸೇರಿದಂತೆ ಕನಿಷ್ಠ 145 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನಿಯರು ಹೇಳಿದ್ದಾರೆ. ಕಳೆದೊಂದು ವಾರದಲ್ಲಿ ಇಸ್ರೇಲ್ ನಡೆಸಿದ ಅತೀ ಭೀಕರ ವಾಯು ದಾಳಿ ಇದಾಗಿದೆ.

ಇಷ್ಟು ದಿನ ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿತ್ತು. ಶನಿವಾರ ಹಲವು ಪತ್ರಿಕಾ ಸಂಸ್ಥೆಗಳಿರುವ ದೊಡ್ಡ ಕಟ್ಟಡದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕೊಟ್ಟು ಬಳಿಕ ಧ್ವಂಸಗೊಳಿಸಿತು. ಆದರೆ, ಇದರ ಹೊರತಾಗಿಯೂ ಹಮಾಸ್ ಉಗ್ರರು ರಾಕೆಟ್ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್ ಇನ್ನಷ್ಟು ಕಠಿಣ ನಿಲುವು ತಳೆದಿದೆ. ಇದುವರೆಗಿನ ದಾಳಿಯಲ್ಲಿ ಗಾಜಾದಲ್ಲಿ 181 ಮಂದಿ ಪ್ಯಾಲೇಸ್ತೀನಿಯರ್ ಮೃತಪಟ್ಟಿದ್ದಾರೆ, ಇಸ್ರೇಲ್ ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಈ ನಡುವೆ ಹಮಾಸ್ ಅಂತಾರಾಷ್ಟ್ರೀಯ ಮಧ್ಯವರ್ತಿಗಳನ್ನು ಬಳಸಿಕೊಂಡು ಕದನ ವಿರಾಮಕ್ಕೆ ಯತ್ನಿಸುತ್ತಿದೆ. ಆದರೆ, ಇದಕ್ಕೆ ಇಸ್ರೇಲ್ ನಿರಾಕರಿಸಿದ್ದು, ಎಲ್ಲಿಯವರೆಗೈ ಅಗತ್ಯವಿದೆಯೋ ಕಾರ್ಯಚರಣೆ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿರುವ ಕಾರಣ 57 ದೇಶಗಳ ಇಸ್ಲಾಮಿಕ್ ಸಹಕಾರ ಸಂಘಟನೆಯ ರಾಷ್ಟ್ರಗಳ ಮುಖಂಡರು ಭಾನುವಾರದಂದು ತುರ್ತು ಸಭೆ ನಡೆಸಿ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights