ತಮಿಳುನಾಡಿನಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ : ಕಠಿಣ ನಿರ್ಬಂಧಗಳು ಜಾರಿ!

ತಮಿಳುನಾಡಿನಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.

ಕೊರೊನಾ ತಡೆಗೆ ತಮಿಳುನಾಡು ಸರ್ಕಾರ ಶನಿವಾರ ಮತ್ತೊಂದು ವಾರ ಲಾಕ್ ಡೌನ್ ಅನ್ನು ವಿಸ್ತರಿಸಿದೆ.  ಹಿಂದಿನ ಲಾಕ್‌ಡೌನ್ ಮೇ 24 ರಂದು ಕೊನೆಗೊಳ್ಳಬೇಕಿತ್ತು. ಆದರೆ ಹೊಸ ಆದೇಶ ನಾಳೆಯಿಂದ ಜಾರಿಗೆ ಬರಲಿದೆ.

ರಾಜ್ಯವು ಶುಕ್ರವಾರ ಕೋವಿಡ್-19 ನಿಂದ 467 ಹೊಸ ಸಾವುಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಇದು 36,184 ಹೊಸ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ರಾಜ್ಯದಲ್ಲಿ ಪ್ರಸ್ತುತ 2,74,629 ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ಇವೆ.

ಇಂದು ಮತ್ತು ನಾಳೆ ರಾತ್ರಿ 9 ರವರೆಗೆ ಅಂಗಡಿಗಳು ತೆರೆದಿರುತ್ತವೆ. ಮೊಬೈಲ್ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜಾಲದ ಮೂಲಕ ಚೆನ್ನೈ ಮತ್ತು ರಾಜ್ಯಾದ್ಯಂತ ತರಕಾರಿಗಳು ಮತ್ತು ಹಣ್ಣುಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಎಲ್ಲಾ ಮಾಲ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ಇನ್ನುಳಿದಂತೆ ಎಂದಿನಂತೆ ಲಾಕ್ಡೌನ್ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights