ಸ್ಟಾಕ್ ಖಾಲಿ : 18+ ಗುಂಪಿನವರಿಗೆ ಇಲ್ಲ ಲಸಿಕೆ – ಡೋಸ್ ಖರೀದಿಸಲು ಕೇಂದ್ರಕ್ಕೆ ಕೇಜ್ರಿವಾಲ್ ಒತ್ತಾಯ!

ದೆಹಲಿಯಲ್ಲಿ ಕೊರೊನಾ ಲಸಿಕೆ ಸ್ಟಾಕ್ ಖಾಲಿಯಾಗುತ್ತಿದ್ದಂತೆ 18 ವರ್ಷ ಮೇಲ್ಪಟ್ಟ ಗುಂಪಿನವರಿಗೆ ಲಸಿಕೆ ಹಾಕುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ತುರ್ತಾಗಿ ಡೋಸ್ ಖರೀದಿಸಬೇಕೆಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಹೌದು… ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲಸಿಕೆ ದಾಸ್ತಾನು ಮುಗಿದಿರುವುದರಿಂದ ದೆಹಲಿಯ 18+ ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ಇಂದಿನಿಂದ (ಶನಿವಾರ) ನಿಲ್ಲಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ , “ದೆಹಲಿಯಲ್ಲಿ ಇಂದಿನಿಂದ 18+ ವಿಭಾಗಕ್ಕೆ ಲಸಿಕೆ ನಿಲ್ಲಿಸಲಾಗಿದೆ. ಈ ವರ್ಗಕ್ಕೆ ಲಸಿಕೆ ಸ್ಟಾಕ್ ಇಲ್ಲ. ಇದರಿಂದಾಗಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ. ಕೆಲವು ಕೇಂದ್ರಗಳಲ್ಲಿ ಕೆಲವೇ ಲಸಿಕೆಗಳು ಮಾತ್ರ ಲಭ್ಯವಿದ್ದು, ಇವುಗಳನ್ನು ಇಂದು ನೀಡಲಾಗುವುದು ” ಎಂದಿದ್ದಾರೆ.

ದೆಹಲಿಗೆ ಇನ್ನೂ 80 ಲಕ್ಷ ಡೋಸ್ ಕೋವಿಡ್ ಲಸಿಕೆ ಬೇಕಾಗುತ್ತದೆ ಮತ್ತು ರಾಜ್ಯಗಳಿಗೆ ಸರಬರಾಜು ಮಾಡಲು ಕೇಂದ್ರವು ತಕ್ಷಣವೇ ವಿದೇಶಿ ರಾಷ್ಟ್ರಗಳಿಂದ ಲಸಿಕೆಗಳನ್ನು ಖರೀದಿಸಬೇಕು.  ಅನೇಕ ದೇಶಗಳು ತಮಗೆ ಬೇಕಾದಕ್ಕಿಂತ ಹೆಚ್ಚಿನ ಲಸಿಕೆಗಳನ್ನು ಸಂಗ್ರಹಿಸಿವೆ ಮತ್ತು ಆ ಲಸಿಕೆಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರವು ವಿನಂತಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights