ಊಟ ಕೇಳಿದ ತಾಯಿಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ ಕ್ರೂರ ಮಗ

ಊಟ ಕೇಳಿದ ಕಾರಣಕ್ಕೆ ಮಗನೊಬ್ಬ 82 ವರ್ಷದ ತಾಯಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿ ಕ್ರೂರತ್ವ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ತಾಲೂಕಿನ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿ 82 ವರ್ಷದ ಯಶೋಧ ಹಾಗೂ ಮಗ ದಾಮೋದರನೊಂದಿಗೆ ವಾಸವಾಗಿದ್ದರು. ತಾಯಿ ಹಸಿವಿನಿಂದ ಮಗನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಮಗ ದಾಮೋದರ ಊಟ ನೀಡದೇ, ಎದ್ದು ನಿಲ್ಲಲು ಆಗದ ವೃದ್ಧೆ ತಾಯಿಯನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ. ದಾಮೋದರ ವೃದ್ಧೆ ತಾಯಿಗೆ ತಲೆಯಲ್ಲಿ ರಕ್ತ ಸೋರುವಂತೆ ಹಲ್ಲೆ ಮಾಡಿದ್ದಾನೆ. ಮನೆ ಮುಂದಿನ ಜಗುಲಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ನೋಡಿದ ಸಮಾಜ ಸೇವಕಿ ರಮಿತ ಶೈಲೇಂದ್ರ, ವೃದ್ಧೆಯ ಮಗನಿಗೆ ಬೈದು ಆತನ ನೆರವಿನಿಂದಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.