ಒಂದೇ ಸಂಖ್ಯೆಯಲ್ಲಿ ಹಲವು ಬಸ್‌ಗಳ ಸಂಚಾರ; ಬಸ್‌ಗಳಿಗೆ 41 ಲಕ್ಷ ರೂ ದಂಡ ವಿಧಿಸಿದ ಆರ್‌ಟಿಓ
ಒಂದೇ ನೊಂದಣಿ ಸಂಖ್ಯೆಯಲ್ಲಿ ಹಲವು ಬಸ್‌ಗಳು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಆರ್‌ಟಿಓ ಅಧಿಕಾರಿಗಲೂ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ಸಾರಿಗೆ ಇಲಾಖೆಗೆ ತೆರಿಗೆ ಕಟ್ಟದೆ ಕಳ್ಳಮಾರ್ಗದಲ್ಲಿ ಸಂಚರಿಸುತ್ತಿದ್ದ 06 ಖಾಸಗೀ ಬಸ್‌ಗಳನ್ನು ಮತ್ತೆ ಮಾಡಲಾಗಿದ್ದು, 41 ಲಕ್ಷ ರೂ ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ಮತ್ತು ದಾಬಸ್‌ಪೇಟೆಯ ನಡುವೆ ಇದ್ದ ಡಾಬಾ ಬಳಿ ಆರ್ಜೆ-19 ಪಿಸಿ 3131 ನೊಂದಣಿ ಸಂಖ್ಯೆ ಸ್ಲೀಪರ್ ಕೋಚ್ ಬಸ್ ನಿಂತಿತ್ತು. ಇದು ರಾಜಸ್ಥಾನದ ಜೋಧ್‌ಪುರಕ್ಕೆ ತೆರಳುವ ಬಸ್ ಆಗಿತ್ತು. ಡಾಬಾ ಬಳಿ ನಿಂತಿರುವುದನ್ನು ಗಮನಿಸಿ, ನೊಂದಣಿ ಸಂಖ್ಯೆ ಪರಿಶೀಲಿಸಿದಾಗ ಬಸ್‌ನ ರಹದಾರಿ ಮತ್ತು ತೆರಿಗೆ ಪಾವತಿ ಅವಧಿ ಅ.31ಕ್ಕೆ ಮುಗಿದಿರುವುದು ಕಂಡು ಬಂದಿದೆ. ಅಲ್ಲದೆ, ವಾರ್ಷಿಕ 6.4 ಲಕ್ಷ ತೆರಿಗೆ ಪಾವತಿಸುವ ಬದಲು ತ್ರೈಮಾಸಿಕ ತೆರಿಗೆ ಕಟ್ಟಿರುವುದಾಗಿ ದಾಖಲೆ ಸೃಷ್ಟಿಸಲಾಗಿತ್ತು ಎಂದು ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಒಳಗೆ ಪ್ರವೇಶಿಸಿದರೆ ಆರ್ಟಿಒಗೆ ಸಿಕ್ಕಿಬೀಳುವ ಭಯದಿಂದ ಹೊರವಲಯದಲ್ಲೇ ನಿಲುಗಡೆ ಮಾಡಿ, ಪ್ರಯಾಣಿಕರನ್ನು ನಗರದ ಒಳಗಿಂದ ಬೇರೆ ವಾಹನದಲ್ಲಿ ಕರೆಸಿಕೊಂಡು ಹೊರರಾಜ್ಯಗಳಿಗೆ ಕರೆದೊಯ್ಯಲಾಗುತ್ತಿತ್ತು. ಜಪ್ತಿ ಮಾಡಿರುವ ಬಸ್‌ಗಳ ಚಾಸ್ಸಿ ನಂಬರ್ ಹಾಗೂ ಬಸ್ ನೋಂದಣಿ ನಂಬರ್ಗಳಲ್ಲೂ ವ್ಯತ್ಯಾಸ ಕಂಡು ಬಂದಿದ್ದು, ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.
ಜೋಧಪುರ ಬಸ್ ಜಪ್ತಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಆನಂದ್ ಟ್ರಾನ್ಸ್ ಲಿಂಕ್ ಹೆಸರಿನ ಎನ್ಎಲ್01 ಬಿ 1794 ನೋಂದಣಿ ಸಂಖ್ಯೆಯ ಬಸ್ ಕಣ್ಣಿಗೆ ಬಿದ್ದಿತ್ತು. ಆದರೆ, ಅದೇ ನೋಂದಣಿಯ ಬಸ್ ತೆರಿಗೆ ಪಾವತಿಸದ ಕಾರಣಕ್ಕೆ ಈ ಮೊದಲೇ ಜಪ್ತಿಯಾಗಿತ್ತು. ಈ ಬಗ್ಗೆ ತಿಳಿದ ನಂತರ ಹೊಸೂರು ರಸ್ತೆ ಡೇರಿ ವೃತ್ತದ ಬಳಿ ಇನ್ನೊಂದು ಬಸ್ ಜಪ್ತಿ ಮಾಡಿದ್ದಾರೆ. ನಂತರ ಎನ್ಎಲ್ 01 ಬಿ 1797 ಹಾಗೂ ಎನ್ಎಲ್ 01 ಬಿ 1795 ಬಸ್ಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Facebook ಬಳಕೆದಾರರು ದ್ವೇಷಭಾಷಣಗಳ ವೀಕ್ಷಣೆಯಲ್ಲಿ ಹೆಚ್ಚು ಆಸಕ್ತರು: ಫೇಸ್‌ಬುಕ್