ಲವ್‌ ಜಿಹಾದ್ ಕಾನೂನು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ; ಕಾನೂನಿಗೆ ಮಾನ್ಯತೆ ಇಲ್ಲ: ಅಲಹಬಾದ್‌ ಹೈಕೋರ್ಟ್‌ ತೀರ್ಪು

ಲವ್‌ ಜಿಹಾದ್‌ ವಿರುದ್ಧ ಉತ್ತರ ಪ್ರದೇಶದ ಆದಿತ್ಯನಾಥ್‌ ಸರ್ಕಾರ ರೂಪಿಸಿರುವ ಕಾನೂನು ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ ಮತ್ತು ಮತಾಂತರ ವಿರುದ್ದದ ಕಾನೂನು ತಪ್ಪಾಗಿದೆ. ಯಾವುದೇ ಸರ್ಕಾರವು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ಕಾನೂನು ಮಾನ್ಯವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಅಲಹಾಬಾದ್ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಆದೇಶವನ್ನು ನೀಡಿದೆ. ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರವು ಮಾನ್ಯವಾಗುವುದಿಲ್ಲ ಎಂದ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠವು ರದ್ದುಪಡಿಸಿತು. ತಮ್ಮ ಬಾಳಸಂಗಾತಿ ಯಾರೆಂದು ನಿರ್ಧರಿಸಲು ಹಾಗೂ ಒಟ್ಟಿಗೆ ವಾಸಿಸಲು ವಯಸ್ಕರಿಗೆ ಹಕ್ಕಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಕಾನೂನು ವೆಬ್‌ಸೈಟ್ ‘ಲೈವ್ ಲಾ’ ವರದಿ ಮಾಡಿದೆ.

ಗೃಹ ಇಲಾಖೆಯ ಸೂಚನೆಯ ಮೇರೆಗೆ ತನಿಖೆ ನಡೆಸಿದ ಯುಪಿ ಪೊಲೀಸರು, ಕಾನ್ಪುರದಲ್ಲಿ ನಡೆದ 22 ಅಂತರ್‌ಧರ್ಮಿಯ ವಿವಾಹಗಳು ಲವ್ ಜಿಹಾದ್ ಪ್ರಕರಣ ಅಲ್ಲ, ಇವುಗಳಲ್ಲಿ ಯಾವುದೆ ಪಿತೂರಿಯೋ ಅಥವಾ ವಿದೇಶೀ ಧನಸಹಾಯವೋ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಹೊರತಾಗಿ, ಬಿಜೆಪಿ ಆಡಳಿತವಿರುವ ಕರ್ನಾಟಕ, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳು ಸಹ ಲವ್ ಜಿಹಾದ್ ನಿಷೇಧಕ್ಕೆ ಕಾನೂನು ತರುವುದಾಗಿ ಘೋಷಿಸಿವೆ.


ಇದನ್ನೂ ಓದಿ: ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights