ಬೆಳ್ಳಂಬೆಳಿಗ್ಗೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ : ಎಲ್ಲೇಲ್ಲೂ ನೀರೇ ನೀರು…

ಕಳೆದೆರೆಡು ಮೂರು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಬೆಂಗಳೂರು ತಂಪಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಗುಡುಗು, ಮಿಂಚು, ಗಾಳಿ ಸಮೇತ ಮಳೆಯಾಗಿದೆ.

ಬೆಳಿಗೆ ಕಣ್ಣುಬಿಡುವ ಹೊತ್ತಿಗಾಗಲೇ ವರುಣನ ಅರ್ಭಟ ಶುರುವಾಗಿ ಬೆಳಗ್ಗೆ ಸುಮಾರು 5 ಗಂಟೆಯಿಂದ ಆರಂಭವಾದ ಮಳೆ ಸುಮಾರು 2 ಗಂಟೆಗಳ ಕಾಲ ಜೋರಾಗಿಯೇ ಸುರಿದಿದೆ. ಬೆಳಗ್ಗೆ 7 ಗಂಟೆಯಾದರೂ ನಿಲ್ಲುವ ಸೂಚನೆ ಕಾಣಲಿಲ್ಲ. ನಗರದ ಎಲ್ಲ ಫ್ಲೈ ಓವರ್ ಗಳನ್ನು ಮುಚ್ಚಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಕಾರು ಚಾಲಕರು ಮತ್ತು ಬೈಕ್ ಸವಾರರಿಗೆ ಸಮಸ್ಯೆಯಾಗಿತ್ತು.

ತಗ್ಗು ಹಾಗೂ ಇಳಿಜಾರು ಪ್ರದೇಶದಲ್ಲಿ ಮಳೆ ನೀರು ಪ್ರವಾಹದಂತೆ ಬರುತ್ತಿದ್ದ ಪರಿನಾಮ ಕೆಲ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಬೆಳಿಗ್ಗೆ ಹಾಲು, ಮೊಸರು, ಪೇಪರ್ ತರಲು ಹೊರಬಂದವರಿಗೆ ಮಳೆ ಅಡ್ಡಿಯನ್ನುಂಟು ಮಾಡಿದ್ದು, ರಸ್ತೆಗಿಳಿದವರಿಗೆ ಮಳೆ ಕೊಂಚ ಕಿರಿಕಿರಿಯನ್ನುಂಟು ಮಾಡಿದೆ. ಕೊರೊನಾ ನಿಯಂತ್ರಿಸಲು ಕಡಿಮೆ ಸಂಖ್ಯೆಯಲ್ಲಿ ವಾಹನಗಳು ಇದ್ದ ಕಾರಣ ಅಷ್ಟಾಗಿ ಸಮಸ್ಯೆ ಆಗಲಿಲ್ಲ.

ಕೆಲ ಸ್ಥಳಗಳಲ್ಲಿ ಅಧಿಕ  ನೀರು ನಿಂತು ಜನ ಓಡಾಟಕ್ಕೆ ತೊಂದರೆಯಾಗಿದ್ದು ಕಂಡು ಬಂತು. ಕೆಂಗೇರಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆಗೆ ನೀರು ನುಗ್ಗಿದ್ದು ಕೆರೆಯಂತಾಗಿತ್ತು. ಕರ್ನಾಟಕ ನೈಸರ್ಗಿಕ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಮಾಹಿತಿ ನೀಡಿತ್ತು. ಬೆಂಗಳೂರು ಅಲ್ಲದೇ ರಾಮನಗರ, ಕೋಲಾರ, ರಾಯಚೂರಿನಲ್ಲೂ ಭಾರೀ ಮಳೆಯಾಗಿದೆ.

ಇನ್ನೂ ಸಾಮಾಜಿಕಿ ಜಾಲತಾಣಗಳಲ್ಲಿ ಮಳೆಯ ವಿಡಿಯೋಗಳು ಹಾಗೂ ಫೋಟೋಗಳು ಹರಿದಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights